ತಿರುವನಂತಪುರಂ: ಕೇರಳ ಹೈಕೋರ್ಟ್‍ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ನಿದಿನ್ ಮಧುಕರ್ ಜಾಮ್ದಾರ್ ಅಧಿಕಾರ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಚಿವ ಪಿ ರಾಜೀವ್, ಸ್ಪೀಕರ್ ಎಎನ್ ಶಂಸೀರ್, ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತು ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ಉಪಸ್ಥಿತರಿದ್ದರು.
ನ್ಯಾಯಮೂರ್ತಿ ನಿದಿನ್ ಮಧುಕರ್ ಜಮ್ದಾರ್ ಅವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಕೀಲರ ಕುಟುಂಬದಲ್ಲಿ ಜನಿಸಿದರು. ಮುಂಬೈ ಕಾನೂನು ಕಾಲೇಜಿನಲ್ಲಿ ಕಾನೂನು ಅಭ್ಯಸಿದ್ದರು. 2012 ರಲ್ಲಿ ಅವರು ಬಾಂಬೆ ಹೈಕೋರ್ಟ್‍ನ ನ್ಯಾಯಮೂರ್ತಿಯಾದರು.
ಮೇ 2023 ರಿಂದ ಬಾಂಬೆ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ. ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ನಂತರ ಬಾಂಬೆ ಹೈಕೋರ್ಟ್‍ನಲ್ಲಿ ನಿತಿನ್ ಜಾಮ್ದಾರ್ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.