ಕುಂಬಳೆ: ಕೋಯಿಕ್ಕೋಡಿನಲ್ಲಿ ವಾಹನ ಅಪಘಾತದಿಂದ ಗಂಭೀರಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕುಂಬಳೆ ಸನಿಹದ ಮೇರ್ಕಳ ಪರಪ್ಪ ಹೌಸ್ ನಿವಾಸಿ ಸಿದ್ದೀಕ್ ಎಂಬವರ ಪತ್ನಿ ತಸ್ಲೀಮಾ(28)ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ತಸ್ಲೀಮಾ ಅವರ ಸಹೋದರ ಅಬ್ದುಲ್ ಜಮಾಲ್, ಸಂಬಂಧಿ ಕುಞËಲಿಮ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆ ಹಾಗೂ ಮಕ್ಕಳಾದ ತಸ್ನಿಯಾ ಹಾಗೂ ಫಾತಿಮ ಅವರು ಕೋಯಿಕ್ಕೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೆ. 24ರಂದು ವಯನಾಡಿನಲ್ಲಿರುವ ಸಂಬಂಧಿಕರ ವ್ಯಾಪಾರಿ ಸಂಸ್ಥೆಗೆ ಭೇಟಿ ನೀಡಿದ ನಂತರ ಮಡವೂರ್ ದರ್ಗಾ ಸಂದರ್ಶನಕ್ಕಾಗಿ ತೆರಳುತ್ತಿದ್ದಾಗ ಇವರಿದ್ದ ಕಾರು ಕೋಯಿಕ್ಕೋಡು ಕೊಡುವಲ್ಲಿಯಲ್ಲಿ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದು ಅಪಘಾತ ಸಂಭವಿಸಿದೆ.