ಕಾಸರಗೋಡು: ಹಾಲೆಹೊಂಡ ಶ್ರೀ ಮಹಾಮಾಯೆ ದೇವಸ್ಥಾನದಲ್ಲಿ ಅ.3 ರಿಂದ 11 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.3 ರಂದು ಪೂರ್ವಾಹ್ನ 9 ಕ್ಕೆ ಶ್ರೀ ಗಣಪತಿ ಹೋಮ, 10.30 ಕ್ಕೆ ಸಾಮೂಹಿಕ ಪ್ರಾರ್ಥನೆ, ರಾತ್ರಿ 7 ರಿಂದ ಭಜನೆ, 8 ಕ್ಕೆ ಪೂಜೆ ನಡೆಯಲಿದೆ. ಅ.10 ರ ವರೆಗೆ ರಾತ್ರಿ 7 ರಿಂದ ಭಜನೆ, ಆ.11 ರಂದು ರಾತ್ರಿ 7.30 ರಿಂದ ಭಜನೆ ನಡೆಯಲಿದೆ. ಆ.11 ರಂದು ರಾತ್ರಿ ಮಹಾನವಮಿಯ ಪ್ರಯುಕ್ತ ರಾತ್ರಿ 10 ಕ್ಕೆ ವಿಶೇಷ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ. ಆ.12 ರಂದು ಮಧ್ಯಾಹ್ನ 12 ಕ್ಕೆ ವಿದ್ಯಾದಶಮಿ ಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.