ಮಧೂರು: ಮಧೂರು ಶ್ರೀಮದಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪಾರಂಪರಿಕ ಅರ್ಚಕರಾಗಿದ್ದ ಮಧೂರು ದಿ. ವಿಷ್ಣು ಕಲ್ಲೂರಾಯ ಅವರ ಪುತ್ರ ರಘು ಅಡಿಗಳು ಎಂದೇ ಪರಿಚಿತರಾಗಿದ್ದ ಮಧೂರು ಮೇಲಿನ ಮನೆ ವಾಸುದೇವ ಕಲ್ಲೂರಾಯ(85)ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ 50 ವರ್ಷಕ್ಕಿಂತಲೂ ಹೆಚ್ಚು ಕಾಲ ಸಹಾಯಕ ಅರ್ಚಕರಾಗಿದ್ದರು. ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.