ಮಂಜೇಶ್ವರ: ಮಂಜೇಶ್ವರದಲ್ಲಿ ಎದುರಾಗಿರುವ ಹೆದ್ದಾರಿ ಸಮಸ್ಯೆಗಳ ಬಗ್ಗೆ ಪರಿಹಾರಕ್ಕಾಗಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ನವದೆಹಲಿಯ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ರಾಜ್ಯ ಸಚಿವ ಹರ್ಷ ಮಲ್ಹೋತ್ರ ಅವರನ್ನು ಭೇಟಿಯಾಗಿ ಮಂಜೇಶ್ವರದಲ್ಲಿ ಅಗತ್ಯವಾಗಿ ಬೇಕಾದ ಅಂಡರ್ ಪಾಸ್ ಅಥವಾ ‘ಯು’ ಟರ್ನ್ ಫ್ಲೈಓವರ್ ಅಗತ್ಯತೆ ಬಗ್ಗೆ ವಿವರಿಸಿ ಮನವಿ ನೀಡಲಾಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೆಂತೋರೋ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯ ಆದರ್ಶ ಬಿ ಎಂ, ಬಿಜೆಪಿ ರಾಜ್ಯ ಪ್ರ ಕಾರ್ಯದರ್ಶಿ ಕೃಷ್ಣ ಕುಮಾರ್, ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ಕುಮಾರ ರೈ ನಿಯೋಗದಲ್ಲಿದ್ದರು.