HEALTH TIPS

ರಾಜಸ್ಥಾನದಲ್ಲಿ ಭಾರತ-ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

       ಜೈಪುರ: ಭಾರತ ಮತ್ತು ಅಮೆರಿಕದ ಸೇನಾ ಪಡೆಗಳು ರಾಜಸ್ಥಾನದ ಮಹಾರಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನ ವಿದೇಶಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಂಟಿ ಸಮರಾಭ್ಯಾಸ ಆರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

           20ನೇ ಆವೃತ್ತಿಯ ಭಾರತ-ಅಮರಿಕ ಸೇನೆಯ ಜಂಟಿ ತಾಲೀಮು ಸೆಪ್ಟೆಂಬರ್ 22ರವರೆಗೆ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಅಮಿತಾಭ್‌ ಶರ್ಮಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

             ಉಭಯ ದೇಶಗಳ ಸೇನೆಗಳು 2004ರಿಂದಲೂ ಪ್ರತಿ ವರ್ಷ ಈ ತಾಲೀಮು ನಡೆಸುತ್ತವೆ.

ಭಾರತ ಮತ್ತು ಅಮೆರಿಕದ ಸೇನೆಯ ತಲಾ 600 ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ನಡೆಸಲು ಉಭಯ ದೇಶಗಳ ಸೇನಾ ಸಾಮರ್ಥ್ಯ ವೃದ್ಧಿ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries