ಕಾಸರಗೋಡು: ಕೇರಳದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ 2390 ಕೋಟಿ ರೂ.ಮೊತ್ತದ ವಿಶ್ವಬ್ಯಾಂಕ್ ಯೋಜನೆಗೆ ಈ ವರ್ಷ ಚಾಲನೆ ನೀಡಲಾಗುವುದು ಎಂದು ಕೃಷಿ ಖಾತೆ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ.
ಅವರು ಕೇರಳ ತೋಟಗಾರಿಕಾ ನಿಗಮ(ಪಿಸಿಕೆ)ಕಾಸರಗೋಡು ಎಸ್ಟೇಟ್‍ನ ಮುಳಿಯಾರಿನಲ್ಲಿ ನೂತನವಾಗಿ ಆರಂಭಗೊಂಡ ಗೇರುಹಣ್ಣಿನ ಕಾರ್ಬೋರೇಟ್ ಪಾನೀಯ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದರು.
ವಿಶ್ವಬ್ಯಾಂಕಿನಿಂದ 1680 ಕೋಟಿ ರೂ. ನೆರವು ಲಭಿಸಿಲಿದ್ದು, ಉಳಿದ ಮೊತ್ತವನ್ನು ರಾಜ್ಯ ವಹಿಸಲಿದೆ. ಈ ಮೊತ್ತವನ್ನು ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಕೃಷಿ ಬೆಳವಣಿಗೆಗೆ ಮತ್ತು ಕೃಷಿ-ವಾಣಿಜ್ಯ ವಲಯವನ್ನು ಬಲಪಡಿಸಲು ಬಳಸಿಕೊಳ್ಳಲಾಗುವುದು. ಕೃಷಿಕರ ಆದಾಯ ಹೆಚ್ಚಿಸಲು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುವುದು. ಗುಣಮಟ್ಟದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ ಆದಾಯ ಹೆಚ್ಚಿಸಿಕೊಳ್ಳಬಹುದು.ಕೃಷಿ ಇಲಾಖೆಯ ಸಹಾಯದಿಂದ ಸುಮಾರು 2000 ಮೌಲ್ಯವರ್ಧನೆಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ಇದನ್ನು ರಾಜ್ಯದ ಬ್ರಾಂಡೆಡ್ ವ್ಯಾಪಾರಿ ಮಳಿಗೆಗಳ ಮೂಲಕ ಜೆನೆರಿಕ್ ಬ್ರ್ಯಾಂಡ್ ಕೇರಳ ಆಗ್ರೋ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೃಷಿ ಗುಂಪುಗಳು ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಅಕ್ಟೋಬರ್ ತಿಂಗಳ ವೇಳೆಗೆ 14 ಕೇರಳ ಅಗ್ರೋ ಬ್ರಾಂಡ್ ಮಳಿಗೆಗಳನ್ನು ಉದ್ಘಾಟಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಕಾಲಾಕಾಲಕ್ಕೆ ಬದಲಾವಣೆ ತಂದುಕೊಳ್ಳುವುದು ಅಗತ್ಯವಾಗಿದ್ದು, ವಿಶ್ವಬ್ಯಾಂಕ್ ನೆರವು ಲಭಿಸಿದಲ್ಲಿ, ತೋಟಗಾರಿಕಾ ನಿಗಮಕ್ಕೂ ಅಗತ್ಯ ಪಾಲು ಲಭ್ಯವಾಗಲಿರುವುದಾಗಿ ತಿಳಿಸಿದರು. ನಿಗಮದ ನೌಕರರ ಸವಲತ್ತು ಒದಗಿಸಲು ಮತ್ತು ನಿಗಮದಲ್ಲಿನ ಬಿಕ್ಕಟ್ಟು ನಿವಾರಿಸಲು ಸರ್ಕಾರ ಎಲ್ಲ ರೀತಿಯ ಸಹಾಯ ಒದಗಿಸಲಿದೆ. ನಿಗಮದ ಉತ್ಪನ್ನಗಳು ಗುಣಮಟ್ಟದೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ಯಾಕ್‍ಗಳೊಂದಿಗೆ ಲಭ್ಯವಾಗಿಸಲು ಅಧಿಕಾರಿಗಳು ಮತ್ತು ನೌಕರರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕೆಲಸ ಮಾಡಬೇಕು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ.ಮೀನಿ, ವಾರ್ಡ್ ಸದಸ್ಯ ರೈಸಾ ರಶೀದ್, ಆಡಳಿತ ಮಂಡಳಿಯ ಸದಸ್ಯರು ಕೆ.ಎಸ್.ಕುರಿಯಾಕೋಸ್, ಪೆÇ್ರ.ಕೆ.ಮೋಹನಕುಮಾರ್, ಜೋಯಿಸ್ ಸೆಬಾಸ್ಟಿಯನ್ ಸಿ.ಪಿ.ಬಾಬು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪ್ಲಾಂಟೇಶನ್ ಕಾಪೆರ್Çರೇಷನ್ ನೌಕರರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ಲಾಂಟೇಶನ್ ಕಾಪೆರ್Çರೇಷನ್ ಕೇರಳ ಲಿಮಿಟೆಡ್ ಅಧ್ಯಕ್ಷ ಒ.ಪಿ.ಅಬ್ದುಸಲಾಂ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಡಾ.ಜೇಮ್ಸ್ ಜೇಕಬ್ ವಂದಿಸಿದರು.