ಮಲಪ್ಪುರಂ: ಮಲಪ್ಪುರಂನಲ್ಲಿ ಜ್ವರ ಬಾಧಿಸಿ ವ್ಯಕ್ತಿಯೊಬ್ಬರು ಮೃತರಾಗಿದ್ದು, ನಿಪಾ ಎಂದು ಶಂಕಿಸಲಾಗಿದೆ. ಮಲಪ್ಪುರಂ ವಂಡೂರು ನಡುವಾ ನಿವಾಸಿ ಯುವಕನೊಬ್ಬನ ಸಾವಿಗೆ ನಿಪಾ ಕಾರಣ ಎಂದು ಶಂಕಿಸಲಾಗಿದೆ.
ಬೆಂಗಳೂರಿನಲ್ಲಿ ವ್ಯಾಸಂಗಗೈಯ್ಯುತ್ತಿದ್ದ ವಿದ್ಯಾರ್ಥಿ ಕಳೆದ ಸೋಮವಾರ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೋಝಿಕ್ಕೋಡ್ನಲ್ಲಿ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಧನಾತ್ಮಕವಾಗಿದೆ. ಪುಣೆ ವೈರಾಲಜಿ ಪ್ರಯೋಗಾಲಯದ ಫಲಿತಾಂಶಗಳ ನಂತರವೇ ನಿಪಾ ದೃಢೀಕರಿಸಬಹುದು. ಎರಡು ತಿಂಗಳ ಹಿಂದೆ ಪಾಂಡಿಕ್ಕಾಡ್ನ ಚೆಂಬ್ರಾಸ್ಸೆರಿಯಲ್ಲಿ 14 ವರ್ಷದ ಬಾಲಕ ನಿಪಾದಿಂದ ಮೃತಪಟ್ಟಿದ್ದ. ಚೆಂಬ್ಸ್ಸೆರಿಯು ನಡುವಾದಿಂದ 10 ಕಿ.ಮೀ ದೂರದಲ್ಲಿದೆ.