ಗಾಜಾಪಟ್ಟಿ: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬರಲು ಇಸ್ರೇಲ್‌ಗೆ 'ನಿಜವಾದ ಒತ್ತಡ' ಹಾಕಿ ಎಂದು ಅಮೆರಿಕಕ್ಕೆ ಹಮಾಸ್ ಒತ್ತಾಯಿಸಿದೆ. ಆದರೆ ಹಮಾಸ್ ಜೊತೆ ಯಾವುದೇ ಒಪ್ಪಂದ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಗಾಜಾಪಟ್ಟಿ: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬರಲು ಇಸ್ರೇಲ್‌ಗೆ 'ನಿಜವಾದ ಒತ್ತಡ' ಹಾಕಿ ಎಂದು ಅಮೆರಿಕಕ್ಕೆ ಹಮಾಸ್ ಒತ್ತಾಯಿಸಿದೆ. ಆದರೆ ಹಮಾಸ್ ಜೊತೆ ಯಾವುದೇ ಒಪ್ಪಂದ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಗಾಜಾ ಸೆರೆಯಲ್ಲಿದ್ದ 6 ಇಸ್ರೇಲಿಗಳ ಸಾವಿನ ಬಳಿಕ ನೇತನ್ಯಾಹು ಮೇಲೆ ಯುದ್ಧ ವಿರಾಮದ ಒತ್ತಡ ಹೆಚ್ಚಾಗುತ್ತಿದ್ದು, ಕದನ ವಿರಾಮ ಮಾತುಕತೆ ನಿಂತು ಹೋಗುವುದಕ್ಕೆ ಹಾಗೂ ಒತ್ತೆಯಾಳುಗಳ ಬಿಡುಗಡೆ ಸಂಬಂಧ ಉಭಯ ಪಕ್ಷಗಾರರು ಪರಸ್ಪರ ದೂರಿಕೊಳ್ಳುತ್ತಿದ್ದಾರೆ.
ಇಸ್ರೇಲ್ ಪ್ರಧಾನಿ ನೇತನ್ಯಾಹು ಹಾಗೂ ಅವರ ಸರ್ಕಾರದ ಮೇಲೆ ನಿಜವಾದ ಒತ್ತಡ ಹೇರಿ. ಇಸ್ರೇಲ್ ಪರ ಕುರುಡಾಗಿ ಪಕ್ಷಪಾತ ವಹಿಸುವುದನ್ನು ನಿಲ್ಲಿಸಿ ಎಂದು ಹಮಾಸ್‌ನ ಕತಾರ್ ಮೂಲದ ಸಂಧಾನಕಾರ ಖಲೀಲ್ ಅಲ್-ಹಯ್ಯಾ ಅಮೆರಿಕಕ್ಕೆ ಒತ್ತಾಯಿಸಿದ್ದಾರೆ.
'ಹಮಾಸ್ ಜೊತೆ ಯಾವುದೇ ಒಪ್ಪಂದ ಇಲ್ಲ' ಎಂದು ನೇತನ್ಯಾಹು ಹೇಳಿದ್ದಾರೆ.
'ದುರದೃಷ್ಟವಶಾತ್, ಒಪ್ಪಂದ ಇನ್ನೂ ಸನ್ನಿಹಿತವಾಗಿಲ್ಲ. ಅವರೇ ಒಪ್ಪಂದಕ್ಕೆ ಬರುವಂತೆ ಮಾಡಲು ನಾವು ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ' ಎಂದು ನೇತನ್ಯಾಹು ಅಮೆರಿಕದ ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ಹಮಾಸ್‌ಗೆ ಶಸ್ತ್ರಾಸ್ತ್ರಗಳು ರವಾನೆಯಾಗುವುದನ್ನು ತಡೆಯಲು ಈಜಿಪ್ಟ್-ಗಾಜಾ ಗಡಿಯಲ್ಲಿನ ಫಿಲಡೆಲ್ಫಿ ಕಾರಿಡಾರ್ ಮೇಲೆ ಸಂಪೂರ್ಣ ಅಧಿಕಾರ ಬೇಕು ಎನ್ನುವುದು ಇಸ್ರೇಲ್ ಬೇಡಿಕೆ. ಆದರೆ ಗಾಜಾ ಪಟ್ಟಿಯಿಂದ ಇಸ್ರೇಲ್ ಸಂಪೂರ್ಣವಾಗಿ ತನ್ನ ಸೇನೆಯನ್ನು ಹಿಂಪಡೆದುಕೊಳ್ಳಬೇಕು ಎನ್ನುವುದು ಹಮಾಸ್‌ನ ವಾದ.
ಕದನ ವಿರಾಮದ ಒಪ್ಪಂದಕ್ಕೆ ಬರಲು ನೇತನ್ಯಾಹು ಹಿಂದೇಟು ಹಾಕುತ್ತಿದ್ದಾರೆ ಎಂದು ಹಮಾಸ್ ಆರೋಪಿಸಿದೆ. ಅಲ್ಲದೆ 'ನಮ್ಮ ಜನರ ವಿರುದ್ಧದ ಆಕ್ರಮಣವನ್ನು ಹೆಚ್ಚಿಸಲು ಮಾತುಕತೆ ನಡೆಸುವ ನೇತನ್ಯಾಹು ಅವರ ಬಲೆಗೆ ಬೀಳದಂತೆ ನಾವು ಎಚ್ಚರಿಕೆ ವಹಿಸುತ್ತೇವೆ' ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ.