ಮುಳ್ಳೇರಿಯ: ಬೋವಿಕ್ಕಾನ ಬೆಳ್ಳಿಪ್ಪಾಡಿಯ ಮಧುವಾಹಿನಿ ವಾಚನಲಾಯದ ನೇತೃತ್ವದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ ಸಾಕ್ಷರತೆಯ ಪ್ರಾಮುಖ್ಯತೆ ಹಾಗು ಜೀವನ ಪ್ರಗತಿ ಎಂಬ ವಿಷಯದಲ್ಲಿ ನಿವೃತ್ತ ಅಧ್ಯಾಪಕ ಗೋವಿಂದ ಬಳ್ಳಮೂಲೆ ತರಗತಿ ನಡೆಸಿದರು.
ರಾಜೇಶ್ ಪಿ.ಜಿ, ಶೋಭಾ ಚೆರವು, ಎಂ.ಲತಿಕ, ಸರಸ್ವತಿ ಜಿ.ಭಟ್ ಮಾತನಾಡಿದರು. ಸಿ.ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಪಿ.ಜ್ಯೋತಿ ಸೂರ್ಯನ್ ವಂದಿಸಿದರು. ಈ ಸಂದರ್ಭ ನಡೆದ ಲೈಬ್ರೆರಿ ಮಹಾಸಭೆಯಲ್ಲಿ ಬೈಲೋ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.