HEALTH TIPS

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ಖಾತ್ರಿಪಡಿಸಬೇಕು-ಮಹಿಳಾ ಮೋರ್ಚಾ

             ಕಾಸರಗೋಡು: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯನ್ನು ಖಾತ್ರಿಪಡಿಸುವುದರ ಜತೆಗೆ ನೇಮಕಾತಿ ಆದೇಶ ಬಂದರೂ ಕೆಲಸಕ್ಕೆ ಸೇರ್ಪಡೆಗೊಳ್ಳದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

              ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರನ್ನೂ ಬದಲಾಯಿಸಲಾಗಿದ್ದು, ನೇಮಕಾತಿ ಇಲ್ಲದೆ ವರ್ಗಾವಣೆಗೊಂಡಿದ್ದಲ್ಲದೆ, ಕಾಸರಗೋಡು ಜನರಲ್ ಆಸ್ಪತ್ರೆಯ ತುರ್ತು ವಿಭಾಗದ ವೈದ್ಯಾಧಿಕಾರಿಯನ್ನೂ ವರ್ಗಾವಣೆ ಮಾಡಲಾಗಿದೆ. ಇದರಿಂದ 3 ವರ್ಷಗಳವರೆಗೆ ಸ್ಥಳ ಬದಲಾವಣೆ ಮಾಡುವುದಿಲ್ಲ ಎಂಬ ಆರೋಗ್ಯ ಸಚಿವರ ಭರವಸೆ ಸುಳ್ಳಾಗಿದೆ.  ಈ ವರ್ಷ ನೇಮಕಾತಿ ಲಭಿಸಿದ 182 ವೈದ್ಯರ ಪೈಕಿ ಪ್ರಸಕ್ತ ಜಿಲ್ಲೆಯಲ್ಲಿ ಕೇವಲ 17 ಮಂದಿ ಮಾತ್ರ ಸೇವೆಯಲ್ಲಿ ಉಳಿದುಕೊಂಡಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ರೀತಿಯಾಗಿ ವೈದ್ಯರು ಬೇಕಾಬಿಟ್ಟಿ ವರ್ಗಾವಣೆ ಪಡೆದು ತೆರಳುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸಿದ್ಧವಾಗಬೇಕು. ಜಿಲ್ಲೆಯಲ್ಲಿ ನೇಮಕಗೊಂಡವರು ರಜೆ ತೆಗೆದುಕೊಂಡು ಅಥವಾ ಉನ್ನತ ವ್ಯಾಸಂಗಕ್ಕಾಗಿ ಇಲ್ಲಿಂದ ಹೋಗುತ್ತಾರೆ. ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜುi ಆಸ್ಪತ್ರೆ ನಿರ್ಮಾಣ ಕಾರ್ಯವೂ ವಿಳಂಬಗತಿಯಲ್ಲಿ ಸಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇತರೆ ಸರ್ಕಾರಿ ಆಸ್ಪತ್ರೆಗಳಿಂದ ವೈದ್ಯರು ಬೇರೆಡೆಗೆ ವರ್ಗಾವಣೆಗೊಂಡು ತೆರಳುತ್ತಿರುವುದರಿಂದ ಜಿಲ್ಲೆಯ ವೈದ್ಯಕೀಯ ವಲಯ ಸಂಪೂರ್ಣ ಅಯೋಮಯವಗಿದೆ. ರಾಜ್ಯದಲ್ಲಿ ಅದಲುಬದಲಾಗಿ ಆಡಳಿತ ನಡೆಸಿಕೊಮಡು ಬಂದಿರುವ ಉಭಯ ರಂಗಗಳು ಜಿಲ್ಲೆಯ ಅಭಿವೃದ್ಧಿಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿವೆ.  ಆರೋಗ್ಯ ವಲಯ ಮಾತ್ರವಲ್ಲ, ಇತರ ಇಲಾಖೆಗಳಲ್ಲೂ ಇದೇ ಸ್ಥಿತಿಯಿದೆ.   ನೌಕರರ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತವಿಲ್ಲದ ಸ್ಥಿತಿ ಕಾಸರಗೋಡಿನಲ್ಲಿದೆ. ಆರೋಗ್ಯ ಕ್ಷೇತ್ರದ ಹಿನ್ನಡೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸಬೆಕಾಗುತ್ತಿದೆ. ಇದಕ್ಕೆ ತಕ್ಷಣ  ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಅಶ್ವಿನಿ ಎಂ.ಎಲ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries