ನವದೆಹಲಿ:ದೇಶದಾದ್ಯಂತ ರಿಲಯನ್ಸ್ ಜಿಯೊ ನೆಟ್‌ವರ್ಕ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇಂಟರ್‌ನೆಟ್ ಇಲ್ಲದೆ ಗ್ರಾಹಕರು ಪರದಾಡುತ್ತಿದ್ದಾರೆ. ಮೊಬೈಲ್ ಇಂಟರ್‌ನೆಟ್, ಜಿಯೊ ಫೈಬರ್ ಸೇರಿ ಗ್ರಾಹಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ನೆಟ್‌ವರ್ಕ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇಂಟರ್‌ನೆಟ್, ನೆಟ್‌ವರ್ಕ್ ಸಮಸ್ಯೆ ಬಗ್ಗೆ ತಕ್ಷಣಕ್ಕೆ ಜಿಯೊ ಕಂಪನಿ ಪ್ರತಿಕ್ರಿಯೆ ನೀಡಿಲ್ಲ.
ಕ್ರೌಡ್-ಸೋರ್ಸ್ಡ್ ಔಟೇಜ್ ಡಿಟೆಕ್ಷನ್ ಪ್ಲಾಟ್‌ಫಾರ್ಮ್ DownDetector ಪ್ರಕಾರ, ದೇಶದಾದ್ಯಂತ 10,000ಕ್ಕೂ ಹೆಚ್ಚು ಜಿಯೊ ಬಳಕೆದಾರರು ನೆಟ್‌ವರ್ಕ್ ವ್ಯತ್ಯಯದ ಬಗ್ಗೆ ವರದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.