ನವದೆಹಲಿ: ಅನುಭವಿ ರಾಜತಾಂತ್ರಿಕ ಮುಕ್ತೇಶ್ ಕುಮಾರ್ ಪರದೇಶಿ ಅವರನ್ನು ಟರ್ಕಿಗೆ ಭಾರತದ ಹೊಸ ರಾಯಭಾರಿಯಾಗಿ ನೇಮಿಸಲಾಗಿದೆ.
ನವದೆಹಲಿ: ಅನುಭವಿ ರಾಜತಾಂತ್ರಿಕ ಮುಕ್ತೇಶ್ ಕುಮಾರ್ ಪರದೇಶಿ ಅವರನ್ನು ಟರ್ಕಿಗೆ ಭಾರತದ ಹೊಸ ರಾಯಭಾರಿಯಾಗಿ ನೇಮಿಸಲಾಗಿದೆ.
1991ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಮುಕ್ತೇಶ್, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಕ್ತೇಶ್ ಅವರು ಕಳೆದ ವರ್ಷ ನಡೆದ ಜಿ20 ಶೃಂಗಸಂಭೆ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉನ್ನತ ಅಧಿಕಾರಿಗಳ ಗುಂಪಿನ ಮುಖ್ಯ ಸದಸ್ಯರೂ ಆಗಿದ್ದರು. ವೀರೇಂದರ್ ಪೌಲ್ ಅವರ ದೀರ್ಘ ಕಾಲದ ಅನಾರೋಗ್ಯದಿಂದ ಟರ್ಕಿ ರಾಯಭಾರಿ ಹುದ್ದೆ ಖಾಲಿಯಾಗಿತ್ತು.
ಮುಕ್ತೇಶ್ ಅವರು ಜುಲೈ 2019ರಿಂದ 2022ರ ವರೆಗೆ ನ್ಯೂಜಿಲ್ಯಾಂಡ್‌ಗೆ ಭಾರತದ ಹೈಕಮಿಷನರ್ ಆಗಿದ್ದರು. ಅದರೊಂದಿಗೆ ಅವರು ಸಮೋವಾ, ವನವಾಟು, ನಿಯು ಮತ್ತು ಕುಕ್ ದ್ವೀಪಗಳಿಗೂ ಏಕಕಾಲದಲ್ಲಿ ಹೈ ಕಮಿಷನರ್ ಆಗಿದ್ದರು. 2016ರಿಂದ 2019ರವರೆಗೆ ಮೆಕ್ಸಿಕೋಗೂ ಭಾರತದ ರಾಯಭಾರಿಯಾಗಿದ್ದರು.