ಕಾಸರಗೋಡು: ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸಿದ ಚಾಲಕನ ವಾಹನ ಚಾಲನಾ ಪರವಾನಗಿ ಒಂದು ವರ್ಷ ಕಾಲಾವಧಿಗೆ ಅಮಾನತುಗೊಳಿಸಿರುವುದಲ್ಲದೆ, ಈ ಚಾಲಕ ಒಂದು ತಿಂಗಳ ವಾಹನ ಚಾಲನಾ ತರಬೇತಿ ಪಡೆದುಕೊಳ್ಳುವಂತೆಯೂ ಸೂಚಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶಿಸಿದ್ದಾರೆ.
ವಿವಾಹ ಮಹೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಡಂಬರ ಕಾರಿನಲ್ಲಿ ಪ್ರಯಾಣಿಕರನ್ನು ತೆರೆದ ಮಹಡಿಯ ಮೇಲೆ ಕುಳ್ಳಿರಿಸಿ, ಹಿಂದಿನಿಂದ ಬರುವ ವಾಹನಗಳ ವೀಡಿಯೊ ಚಿತ್ರೀಕರಿಸುತ್ತಿದ್ದರು. ಇದರಿಂದ ಇತರ ವಾಹನಗಳಿಗೆ, ಪ್ರಯಾಣಿಕರಿಗೆ ಮತ್ತು ಇತರ ರಸ್ತೆ ಬಳಕೆದಾರರಿಗೆ ಅಪಾಯಕಾರಿಯಾಗುತ್ತಿದ್ದ ಬಗ್ಗೆ ವಿಡಿಯೋ ಸಹಿತ ದೂರನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ರವಾನಿಸಲಾಗಿದ್ದು, ಈ ದೂರಿನ ಮೇರೆಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸಂಗ್ರಹಿಸಿದ ಸಮಗ್ರ ಮಾಹಿತಿಯ ಆಧಾರದ ಮೇಲೆ ವಾಹನ ಚಲಾಯಿಸಿದ ಚಾಲಕನ ಚಾಲನಾ ಪರವಾನಗಿಯನ್ನು ಒಂದು ವರ್ಷಕ್ಕೆ ಅಮಾನತುಗೊಳಿಸಲಾಗಿದೆ ಮತ್ತು ಕೇರಳ, ಎಡಪಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಸರ್ಕಾರದ ಅಧೀನದಲ್ಲಿರುವ ಐಡಿಟಿಆರ್ ವಾಹನ ತರಬೇತಿ ಸಂಸ್ಥೆಯಲ್ಲಿ ಒಂದು ತಿಂಗಳ ತರಬೇತಿ ಪಡೆದುಕೊಳ್ಳುವಂತೆಯೂ ಕಾಸರಗೋಡು ಎನ್‍ಫೆÇೀರ್ಸ್‍ಮೆಂಟ್ ಆರ್‍ಟಿಒ ಪಿ. ರಾಜೇಶ್ ಸುಚಿಸಿದ್ದಾರೆ.