HEALTH TIPS

ಉದಯನಿಧಿಗೆ ಡಿಸಿಎಂ ಪಟ್ಟ: ಸಿ.ಎಂ ಸ್ಟಾಲಿನ್ ಸುಳಿವು

 ಚೆನ್ನೈ: ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಮಂಗಳವಾರ ಸುಳಿವು ನೀಡಿದ್ದಾರೆ.

ಇದರೊಂದಿಗೆ ಸಚಿವ ಸಂಪುಟ ಬದಲಾವಣೆಯ ಬಗ್ಗೆಯೂ ಎಂ.ಕೆ ಸ್ಟಾಲಿನ್‌ ಪರೋಕ್ಷವಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್ ಅವರು, 'ಯಾರಿಗೂ ನಿರಾಸೆಯಾಗಲ್ಲ, ಬದಲಾವಣೆಯಾಗುತ್ತದೆ' ಎಂದು ಹೇಳಿದ್ದಾರೆ.

ಸಚಿವ ಸಂಪುಟ ಬದಲಾವಣೆ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ನಿರೀಕ್ಷೆಯಂತೆ ತಮ್ಮ ಪುತ್ರ ಉದಯನಿಧಿಗೆ ಪ್ರಮುಖ ಹುದ್ದೆ ನೀಡುವ ಬಗ್ಗೆ ಸ್ಟಾಲಿನ್ ಈ ಹಿಂದೆಯು ಎರಡು ಬಾರಿ ಸುಳಿವು ನೀಡಿದ್ದರು.

'ಉದಯನಿಧಿ ಅವರನ್ನು ಶೀಘ್ರವೇ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ' ಎಂದು ತಮಿಳುನಾಡಿನ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕಾ ಸಚಿವ ಥಾ ಮೋ ಅಂಬರಸನ್‌ ಅವರು ಗುರುವಾರ ತಿಳಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries