ಅಮೃತಸರ: ಪಾಕಿಸ್ತಾನದ ನುಸುಳುಕೋರನನ್ನು ಗಡಿ ಭದ್ರತಾ ಪಡೆಯ ಯೋಧರು ಪಂಜಾಬ್‌ನ ಗಡಿ ಸಮೀಪ ಗುಂಡಿಕ್ಕಿ ಕೊಂದಿದ್ದಾರೆ ಎಂದು ಬಿಎಸ್‌ಎಫ್‌ನ ವಕ್ತಾರ ತಿಳಿಸಿದ್ದಾರೆ.
ಅಮೃತಸರ: ಪಾಕಿಸ್ತಾನದ ನುಸುಳುಕೋರನನ್ನು ಗಡಿ ಭದ್ರತಾ ಪಡೆಯ ಯೋಧರು ಪಂಜಾಬ್‌ನ ಗಡಿ ಸಮೀಪ ಗುಂಡಿಕ್ಕಿ ಕೊಂದಿದ್ದಾರೆ ಎಂದು ಬಿಎಸ್‌ಎಫ್‌ನ ವಕ್ತಾರ ತಿಳಿಸಿದ್ದಾರೆ.
'ಸೋಮವಾರ ರಾತ್ರಿ 9.15ರ ಸುಮಾರಿಗೆ ಅಮೃತಸರ ಜಿಲ್ಲೆಯ ರತನ್ ಖುರ್ದ್ ಹಳ್ಳಿಯ ಸಮೀಪ ಅನುಮಾನಾಸ್ಪದ ವ್ಯಕ್ತಿಯೊಬ್ಬ ಅಂತರರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿರುವುದು ಕಂಡುಬಂದಿದೆ.
ಕರ್ತವ್ಯದಲ್ಲಿದ್ದ ಭದ್ರತಾ ಪಡೆಯ ಸಿಬ್ಬಂದಿ ನುಸುಳುಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಆತನ ಬಳಿ ₹270 ಪಾಕಿಸ್ತಾನಿ ಕರೆನ್ಸಿ ಮತ್ತು ಅರ್ಧ ಹರಿದ ₹10ರ ನೋಟು ಪತ್ತೆಯಾಗಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಯ ಯೋಧರು ಕಾವಲು ಕಾಯುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.