ಪಟ್ನಾ: ಬಿಹಾರದ ಮಗಧ್ ಜಿಲ್ಲೆಯಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯನ್ನು ಮತ್ತೆ ಬಲಪಡಿಸಲು ನಡೆಸಿದ ಪಿತೂರಿಯಲ್ಲಿ ಭಾಗಿಯಾದ ಪ್ರಮುಖ ನಕ್ಸಲ್ ನಾಯಕನ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಲಾದ ಹೆಚ್ಚುವರಿ ಆರೋಪಪಟ್ಟಿಯಲ್ಲಿ ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐನ ಉತ್ತರ ಪ್ರಾದೇಶಿಕ ದಳದ ಮುಖ್ಯಸ್ಥ ಪ್ರಮೋದ್ ಮಿಶ್ರಾ ಅಲಿಯಾಸ್ ಬನ್ವಾರಿ ಜೀ ಎಂಬಾತನ ನಿಕಟವರ್ತಿಯಾಗಿದ್ದ ವಿನೋದ್ ಮಿಶ್ರಾ ಅಲಿಯಾಸ್ ಬಿನೋದ್ ಕುಮಾರ್ ಮಿಶ್ರಾನನ್ನು ಹೆಸರಿಸಲಾಗಿದೆ.
ಆರೋಪಿ ವಿನೋದ್ ಮಿಶ್ರಾ, ಸಿಪಿಐ (ಮಾವೋವಾದಿ) ನಕ್ಸಲ್ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರಿಗೆ ಸಭೆ ನಡೆಸಲು ತನ್ನ ಮನೆಯಲ್ಲಿ ಆಶ್ರಯ ನೀಡಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಎನ್‌ಐಎ ಹೇಳಿಕೆ ಬಿಡುಗಡೆ ಮಾಡಿದೆ.