ತಿರುವನಂತಪುರಂ: ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಸರ್ಕಾರವು ಸೆಕ್ರೆಟರಿಯೇಟ್‍ನಲ್ಲಿ ಓಣಂ ಆಚರಣೆಯನ್ನು ನಿರ್ಬಂಧಿಸಿದೆ.
ಸೆಕ್ರೆಟರಿಯೇಟ್ ನಲ್ಲಿ ಓಣಂ ಆಚರಣೆ ಮತ್ತು ಸಿಬ್ಬಂದಿ ಸ್ಪರ್ಧೆಗಳಿಗೆ ಯಾವುದೇ ಅನುಮತಿ ಇರುವುದಿಲ್ಲ. ಏತನ್ಮಧ್ಯೆ, ಎಲ್ಲಾ ಇಲಾಖೆಗಳು ಸ್ಪರ್ಧೆಯಿಲ್ಲದೆ ಪೂಕಳಂ ರಚಿಸಲು ಅನುಮತಿಸಲಾಗಿದೆ. ಸೆಕ್ರೆಟರಿಯೇಟ್ ಎಂಪ್ಲಾಯಿಸ್ ಅಸೋಸಿಯೇಶನ್‍ನ ಓಣಂ ಸ್ಮರಣಿಕೆಯನ್ನು ಸಹ ಬಿಡುಗಡೆ ಮಾಡುವಂತಿಲ್ಲ.
ರಾಜ್ಯಾದ್ಯಂತ ಓಣಂ ಆಚರಣೆಗೆ ನಿರ್ಬಂಧ ಹೇರಲಾಗಿದೆ. ವಯನಾಡ್ ಭೂಕುಸಿತದಿಂದ ಹಾನಿಗೊಳಗಾದವರು ಸೇರಿದಂತೆ ವೈತ್ತಿರಿ ತಾಲೂಕಿನಲ್ಲಿ ಸಾಲಗಳ ಮೇಲಿನ ಆದಾಯ ವಸೂಲಾತಿ ಕ್ರಮಗಳ ಮೇಲೆ ಸರ್ಕಾರವು ಮೊರೆಟೋರಿಯಂ ಘೋಷಿಸಿದೆ. ಮುಂದಿನ ಸೂಚನೆ ಬರುವವರೆಗೂ ಜಪ್ತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ. ವಿಪತ್ತು ಪೀಡಿತ ಪ್ರದೇಶಗಳ ಜನರ ಸಾಲಗಳಿಗೆ ಈ ಪ್ರಕಟಣೆ ಅನ್ವಯವಾಗುತ್ತದೆ.
ಇದೇ ವೇಳೆ ಈ ವಷರ್Àದ ಸಪ್ಲೈಕೋ ಓಣಂ ಮೇಳಗಳ ರಾಜ್ಯಮಟ್ಟದ ಉದ್ಘಾಟನೆ ಇಂದು ಸಂಜೆ 5 ಗಂಟೆಗೆ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿರುವನಂತಪುರದ ಎಕಿμÉ್ಕಕೋಟಾ ಇಕೆ ನಾಯನಾರ್ ಪಾರ್ಕ್‍ನಲ್ಲಿ ಈ ವರ್ಷದ ಓಣಂ ಸಪ್ಲೈಕೋ ಮೇಳವನ್ನು ಉದ್ಘಾಟಿಸಿದರು. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಜಿ.ಆರ್.ಅನಿಲ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ.ಶಿವನ್ ಕುಟ್ಟಿ ಅವರು ಮೊದಲ ಮಾರಾಟವನ್ನು ನೆರವೇರಿಸಿದರು.