ಮಧೂರು: ದೇಶಮಂಗಲ ಸಮಜ್ಞ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ಬಿನ ಮೂರನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಭಾನುವಾರ ಜರುಗಿತು. ಇದರ ಅಂಗವಾಗಿ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಿಂದ ದೇಶಮಂಗಲ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದವರೆಗೆ ನಡೆಯಿತು.ಬೆಳಗ್ಗೆ ಬಾಲ ಗೋಕುಲದ ಸಹಕಾರದೊಂದಿಗೆ ಮಕ್ಕಳ ಶ್ರೀ ಕೃಷ್ಣನ ವೇಷಧಾರಿಗಳ ಶೋಭಾಯತ್ರೆಗೆ ಪ್ರಭಾಕರ ಕಾರಂತ ದೇಶಮಂಗಲ, ಕೋಟೆಕುಂಜ ಲಕ್ಷ್ಮಣ ನೊಂಡ, ಶ್ರೀ ಶ್ರೀ ಆಂಜನೇಯ ಸ್ವಾಮಿ, ಮೋಹನ್ ಕುಮಾರ್ ಆಳ್ವ ಅಡ್ಕ, ಜಗದೀಶ್ ಆಚಾರ್ಯ ಕಂಬಾರು,ಜೆ.ಕೆ ಶರತ್ ಆಚಾರ್ಯ ಕಂಬಾರು, ದೇವದಾಸ ಆಚಾರ್ಯ ದೇಶಮಂಗಲ, ನಾರಾಯಣ ಆಚಾರ್ಯ ಕಂಬಾರು, ಸಚ್ಚಿದಾನಂದ ಆಚಾರ್ಯ ಕಂಬಾರು,ಹೃತ್ತಿಕ್ ಕಂಬಾರು ಮುಂತಾದವರು ನೇತೃತ್ವ ವಹಿಸಿದರು.
ಮಕ್ಕಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳನ್ನು ಪುತ್ತೂರು ಕೊಟ್ಯ ಶ್ರೀ ಧೂಮಾವತಿ ದೈವಸ್ಥಾನದ ಧರ್ಮದರ್ಶಿ ಕೆ ಎನ್ ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಹುಡ್ಕೋದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಕೋಟೆಕುಂಜ ರವೀಂದ್ರ ಆಳ್ವ ಉದ್ಘಾಟಿಸಿದರು. ಸಮಜ್ಞ ಅಧ್ಯಕ್ಷ ಕೆ ಜೆ ಶರತ್ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಶ್ರೀ ಶ್ರೀ ಆಂಜನೇಯ ಸ್ವಾಮಿ ದೇಶಮಂಗಲ, ಬೆದ್ರಡ್ಕ ದೈವಸ್ಥಾನದ ಆಡಳಿತ ಧರ್ಮದರ್ಶಿ ಕೋಟೆ ಕುಂಜ ರಮೇಶ್ ರೈ, ಎಸ್.ರಾಮ ಶೆಟ್ಟಿ ಮಾಸ್ಟರ್ ಪುಳ್ಕೂರು, ಡಾ. ಸುಬ್ರಮಣ್ಯ ಭಟ್ ಖಂಡಿಗೆ, ವಿಶೇಷ ಕಂದಾಯ ನಿರೀಕ್ಷಕ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೂಡ್ಲು ಗ್ರಾಮಾಧಿಕಾರಿ ಎಂ.ಬಿ ಜಯಪ್ರಕಾಶ ಆಚಾರ್ಯ, ಯಕ್ಷಗಾನ ಕಲಾವಿದ ತಿಮ್ಮಪ್ಪ ಪಾಟಾಳಿ ಬೆದ್ರಡ್ಕ,ಕೆ ಜಗದೀಶ್ ಆಚಾರ್ಯ ಕಂಬಾರು, ಚಂದ್ರಶೇಖರ ಪೂಜಾರಿ ನಿರಾಳ, ದೇಶಮಂಗಲ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದ ಅಧ್ಯಕ್ಷ ನರೇಂದ್ರ ಆಚಾರ್ಯ ದೇಶಮಂಗಲ,ಮಹಿಳಾ ಸಮಿತಿ ಅಧ್ಯಕ್ಷ ಲೀಲಾವತಿ ಎ.ಆಚಾರ್ಯ ಮುಂತಾದವರು ಶುಭಾಶಂಸನೆ ನಡೆಸಿದರು.ನಂತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಮಿಥುನ್ ಆಚಾರ್ಯ ಕಂಬಾರು ಸ್ವಾಗತಿಸಿದರು. ಭುವನೇಶ ಆಚಾರ್ಯ ಬದಿಯಡ್ಕ ಧನ್ಯವಾದವಿತ್ತರು. ಗಣೇಶ್ ಆಚಾರ್ಯ ಕಯ್ಯಾರು ಹಾಗೂ ಜಿತೇಶ್ ಕುಂಬಳೆ ಕಾರ್ಯಕ್ರಮ ನಿರ್ವಹಿಸಿದರು.