ಪೆರ್ಲ: ಪ್ರಣವ್ ಫೌಂಡೇಶನ್ ಹಾಗೂ ಆರ್.ವಿ ಚಾರಿಟೇಬಲ್ ಟ್ರಸ್ಟ್ ಸಹಯೋಗದ ಪುಸ್ತಕ- 2024, ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಪಡ್ರೆ ಸರ್ಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಬಿ ವಹಿಸಿದ್ದರು. ಕುಂಬಳೆ ಉಪಜಿಲ್ಲೆಯ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಹಾಗೂ ನಿವೃತ್ತ ಪ್ರಾಚಾರ್ಯ ಯತೀಶ್ ಕುಮಾರ್ ರೈ ಅವರು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ಫೌಂಡೇಶನ್ ನ ಅಧಿಕೃತರು ಅರ್ಹ ಶಾಲೆಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಾರ್ಹ ಎಂದರು. ನಿವೃತ್ತ ಪ್ರಾಧ್ಯಾಪಕ ಮಧುಸೂದನ ಎಮ್ ಶುಭ ಹಾರೈಸಿದರು. ಫೌಂಡೇಶನ್‍ನ ಟ್ರಸ್ಟಿ ಗುರುರಂಜನ ಪುಣಿಚಿತ್ತಾಯ, ವಿಜಯರಾಜ್ ಪಿ ಉಪಸ್ಥಿತರಿದ್ದರು. ಅಧ್ಯಾಪಕ ಕಮಲಾಕ್ಷ ನಾಯಕ್ ಸ್ವಾಗತಿಸಿ, ಕೃಷ್ಣರಾಜ ವಂದಿಸಿದರು.