ಕುಂಬಳೆ: ಧರ್ಮತ್ತಡ್ಕದ ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯದ ಆಶ್ರಯದಲ್ಲಿ ಕಲಾ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಈ ಸಂಬಂಧ ನಡೆದ ಸಭಾ ಕಾರ್ಯಕ್ರಮ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕಾಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ದೀಪ ಬೆಳಗಿಸಿ ಉದ್ಘಾಟಿಸಿ, ನಾಡಿನೆಲ್ಲೆಡೆಗಳಿಗಿಂತ ವಿಭಿನ್ನವಾಗಿ ಇಲ್ಲಿನ ಗಣೇಶೋತ್ಸವ ಮಾದರಿಯ ಗಣೇಶೋತ್ಸ ಎಂದು ನುಡಿದರು.
ವಸಂತ ಪಂಡಿತ್ ಗುಂಪೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಇತ್ತೀಚಿಗೆ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಪ್ಪ ಗೌಡ ನೇರೋಳು, ಸಂಕಪ್ಪ ಗೌಡ ನೇರೋಳು, ವಸಂತ ಮೇಪೆÇೀಡು, ರೇವತಿ ಟೀಚರ್ ಕಕ್ವೆ, ಸೀತಾರಾಮ ಭಟ್ ಕೆದುಕೋಡಿ, ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು, ಎಚ್.ಎನ್.ಚಂದ್ರಶೇಖರ ಭಟ್ ನೆರಿಯ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಪಿ ರಾಮಚಂದ್ರ ಭಟ್ ಮೇಪೋಡು, ಎನ್ ರಾಮಚಂದ್ರ ಭಟ್ ನೇರೋಳು, ಎನ್ ಶಂಕರನಾರಾಯಣ ಭಟ್ ನೇರೋಳು ಶುಭಹಾರೈಸಿದರು. ಗ್ರಂಥಾಲಯದ ಅಧ್ಯಕ್ಷ ರವಿಲೋಚನ ಸಿಯಚ್ ಚೆಕ್ಕೆಮನೆ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ದ ಉಪಾಧ್ಯಕ್ಷ ಸಿಯಚ್ ರಾಮಮೋಹನ ಚೆಕ್ಕೆ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ರವಿಚಂದ್ರ ಇಟ್ಟಿಗುಂಡಿ ವಂದಿಸಿದರು. ಕು.ಚಿತ್ರಲತಾ ನಿರೂಪಿಸಿದರು. ಕು.ಪ್ರಜ್ಞಾ ಮತ್ತು ಬಳಗ ಪ್ರಾರ್ಥನೆ ಹಾಡಿದರು.