ಇನ್ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook) ಮಾದರಿಯ ಫೀಚರ್ ಇದೀಗ ವಾಟ್ಸ್ ಆಯಪ್ (WhatsApp app) ನಲ್ಲೂ ಬಂದಿದೆ. ಫೇಸ್‌ಬುಕ್‌ನಲ್ಲಿ ನೀವು ಬಳಸುತ್ತಿದ್ದ ಸಿಂಬಲ್‌ಗಳನ್ನು ಇನ್ಮುಂದೆ ನೀವು ವಾಟ್ಸ್ ಆಯಪ್‌ನಲ್ಲೂ ಬಳಸಬಹುದಾಗಿದೆ. ವಾಟ್ಸ್ ಆಯಪ್ ತನ್ನ ಸೇವೆಯನ್ನು ಅಪ್ಡೇಟ್ ಮಾಡಿಕೊಳ್ಳುತ್ತಲ್ಲೇ ಇರುತ್ತದೆ.
ವಾಟ್ಸ್ ಆಯಪ್ ಇದೀಗ ಸ್ಟೇಸ್ ನಲ್ಲಿ ಹೊಸ ಮಾದರಿಯ ವಿನ್ಯಾಸವನ್ನು ಪರಿಚಯಿಸಿದೆ. ವಾಟ್ಸ್ ಆಯಪ್ ನಲ್ಲಿ ನೀವು ಸ್ಟೇಟಸ್ ಹಾಕಿದರೆ ಅದನ್ನು ನೋಡಿದವರು ಆರ್ಟ್ ಸಿಂಬಲ್ ಒತ್ತುವುದಕ್ಕೆ ಅವಕಾಶ ಇದೆ. ಈ ರೀತಿ ಆರ್ಟ್ ಸಿಂಬಲ್ ಒತ್ತಿದರೆ ನಿಮ್ಮ ಸ್ಕ್ರೀನ್ ಮೇಲೆ ಆರ್ಟ್ ಸಿಂಬಲ್ ಮೂಡಲಿದೆ. ಅಲ್ಲದೇ ಸ್ಟೇಟಸ್‌ನ ಬಲ ಭಾಗದಲ್ಲಿ ಹೃದಯಾಕಾರದ ಸಿಂಬಲ್ ಸೃಷ್ಟಿಸಲಾಗಿದೆ. ಈ ಸಿಂಬಲ್‌ನ ಮೇಲೆ ನೀವು ಒತ್ತಿದರೆ, ಆ ಸ್ಟೇಟಸ್ ಹಾಕಿದವರ ಚಾಟ್ ಬಾಕ್ಸ್‌ಗೆ ಹೋಗದೆ, ಸ್ಟೇಟಸ್‌ನಲ್ಲೇ ಯಾರು ರಿಯಾಕ್ಟ್ ಮಾಡಿದ್ದಾರೆ ಎನ್ನುವುದನ್ನು ನೀವು ನೋಡಬಹುದಾಗಿದೆ. ಸಾಮಾನ್ಯವಾಗಿ ಯಾರಾದರೂ ನಮ್ಮ ಸ್ಟೇಟಸ್ ಲೈಕ್ ಮಾಡಿದರೆ ನಾವು ನಮ್ಮ ಚಾಟ್ ಬಾಕ್ಸ್ (ಮೆಸೇಜ್ ಚಾಟ್)ಗೆ ಹೋಗಿಯೇ ನೋಡಬೇಕಿತ್ತು. ಆದರೆ, ಇದೀಗ ನೀವು ಸ್ಟೇಟಸ್‌ನ ಅಡಿಯಲ್ಲೇ ಯಾರು ರಿಯಾಕ್ಟ್ ಮಾಡಿದ್ದಾರೆ ಎಂದು ತಿಳಿಯಲಿದೆ. ಅಲ್ಲದೇ ಯಾರು ಆರ್ಟ್ ಸಿಂಬಲ್ ಒತ್ತಿದ್ದಾರೆ ಎನ್ನುವುದು ಸಹ ಸ್ಟೇಟಸ್‌ನ ಮೇಲೆ (ಮೊದಲು) ತೋರಿಸುತ್ತದೆ.
ಎಂಟು ಸ್ಟೇಟರ್ ಒಮ್ಮೆಲೇ ನೋಡಬಹುದು
ವಾಟ್ಸ್ ಆಯಪ್ ಈಗ ಎರಡು ಪ್ರಮುಖ ಅಪ್ಡೇಟ್ಸ್‌ಗಳನ್ನು ತಂದಿದೆ. ಅದರಲ್ಲಿ ಸ್ಟೇಟಸ್ ಆರ್ಟ್ ಸಿಂಬಲ್ ಒಂದಾದರೆ, ಏಕಕಾಲಕ್ಕೆ ಹಲವು ಸ್ಟೇಟಸ್‌ಗಳನ್ನು ನೋಡುವುದು ಮತ್ತೊಂದು. ಸಾಮಾನ್ಯವಾಗಿ ಮೊದಲೆಲ್ಲ ನೀವು ಒಂದು ಬಾರಿ ಒಂದು ಸ್ಟೇಟಸ್ ನೋಡಬಹುದಾಗಿತ್ತು. ಆದರೆ, ಈಗ ನೀವು ಏಕಕಾಲಕ್ಕೆ ಎಂಟು ಜನ ಯಾವ ಸ್ಟೇಟಸ್ ಇಟ್ಟಿದ್ದಾರೆ ಎಂದು ನೋಡಬಹುದು. ಏಕಕಾಲಕ್ಕೆ 8 ಸ್ಟೇಟಸ್ ಆಪ್ಷನ್ ತೆಗೆದುಕೊಳ್ಳಲಿದ್ದು, ನಿಮಗೆ ಬೇಕಾದ ಸ್ಟೇಟಸ್ ಆಯ್ಕೆ ಮಾಡಿಕೊಂಡು ನೋಡಬಹುದಾಗಿದೆ. ನಿಮಗೆ ಕೆಲವರ ಸ್ಟೇಟಸ್ ನೋಡುವುದು ಬೇಡ ಎನಿಸಿದರೆ, ಆ ಸ್ಟೇಟಸ್ ಸ್ಕಿಪ್ ಮಾಡುವುದಕ್ಕೂ ಅವಕಾಶ ಇದೆ. ಮೊದಲು ಈ ರೀತಿಯ ಅವಕಾಶ ಇರಲಿಲ್ಲ. ನಿಮಗೆ ಯಾವುದಾದರು ವ್ಯಕ್ತಿಯ ಸ್ಟೇಟಸ್ ನೋಡಬಾರದು ಎಂದು ಅನಿಸಿದರೂ, ನಿಮಗೆ ವಾಟ್ಸ್ ಆಯಪ್‌ನಲ್ಲಿ ಆ ರೀತಿಯ ಅವಕಾಶ ಇರಲಿಲ್ಲ. ಇದೀಗ ಈ ರೀತಿಯ ಆಪ್ಷನ್ ಅನ್ನು ವಾಟ್ಸ್ ಆಯಪ್ ಪರಿಚಯಿಸಿದೆ. ಇನ್ನು ಈ ಹೊಸ ಫೀಚರ್ ಈಗಾಗಲೇ ಮೆಟಾ ಸಂಸ್ಥೆಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯವಾಗಿದೆ.
ವಾಟ್ಸ್ ಆಯಪ್ ಈಚೆಗೆ ಪರಿಚಯಿಸಿದ್ದೇನು
ವಾಟ್ಸ್ ಆಯಪ್ ಈಚೆಗೆ ಹಲವು ಫೀಚರ್‌ಗಳನ್ನು ಪರಿಚಯಿಸಿದೆ. ಅದರಲ್ಲಿ ಸ್ಟೇಟಸ್‌ಗೆ ಸಂಬಂಧಿಸಿದ ಹಲವು ಹೊಸ ವಿಷಯಗಳಿವೆ. ಇನ್ನು ವಾಟ್ಸ್ ಆಯಪ್ ಲಿಸ್ಟ್ ತೆಗೆದರೆ ನೀವು ಆ ವ್ಯಕ್ತಿ ಇಟ್ಟಿರುವ ಸ್ಟೇಟಸ್ ನೋಡಬಹುದು. ಏಕಕಾಲಕ್ಕೆ ಹಲವು ಸ್ಟೇಟಸ್ ಹಾಗೂ ಆರ್ಟ್ ಸಿಂಬಲ್ ಹೊಸದಾಗಿ ಪರಿಚಯಿಸಿರುವ ಫೀಚರ್‌ಗಳು ಇನ್ನು ನಿಮ್ಮ ವಾಟ್ಸ್ ಆಯಪ್ ಟೆಕ್ಸಟ್ ಮೆಸೇಜ್ ಎಡಿಟಿಂಗ್ ಆಪ್ಷನ್ ಸಹ ಇದೆ.