ಶಿಮ್ಲಾ: ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.
ಶಿಮ್ಲಾ: ಸಂವಿಧಾನದ 10ನೇ ಪರಿಚ್ಛೇದಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಅನರ್ಹಗೊಂಡ ಶಾಸಕರು ಪಿಂಚಣಿ ಪಡೆಯುವುನ್ನು ನಿರ್ಬಂಧಿಸುವ ಮಸೂದೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.
'ಹಿಮಾಚಲ ಪ್ರದೇಶದ ವಿಧಾನಸಭೆ (ಸದಸ್ಯರ ಭತ್ಯೆ ಹಾಗೂ ಪಿಂಚಣಿ) ತಿದ್ದುಪಡಿ ಕಾಯ್ದೆ 2024'ಗೆ ವಿಧಾನಸಭೆ ಒಪ್ಪಿಗೆ ನೀಡಿದೆ.
ಇಂಥ ಮಸೂದೆಗೆ ಒಪ್ಪಿಗೆ ನೀಡಿದ ದೇಶದ ಮೊದಲ ರಾಜ್ಯ ಎನ್ನುವ ಶ್ರೇಯ ಹಿಮಾಚ ಪ್ರದೇಶದ ಪಾಲಾಗಿದೆ.
ಈ ಮಸೂದೆಯನ್ನು 'ರಾಜಕೀಯ ಸೇಡು' ತೀರಿಸಿಕೊಳ್ಳುವ ಕ್ರಮ ಎಂದು ವಿರೋಧ ಪಕ್ಷ ಬಿಜೆಪಿ ಹೇಳಿದೆ. ಅಲ್ಲದೆ ಈ ಹಿಂದಿನ ಘಟನೆಗಳಿಗೆ ಇದು ಅನ್ವಯವಾಗದು ಎಂದಿದೆ.
'ಸಂವಿಧಾನದ 10ನೇ ಪರಿಚ್ಚೇದದಡಿ ಯಾವುದೇ ಸಮಯದಲ್ಲಿ ವ್ಯಕ್ತಿಯು ಅನರ್ಹಗೊಂಡಿದ್ದರೆ ಪಿಂಚಣಿಗೆ ಅರ್ಹರಾಗಿರುವುದಿಲ್ಲ' ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಮಸೂದೆಗೆ ರಾಜ್ಯಪಾಲರ ಸಹಿ ಬಿದ್ದರೆ ಅಧಿಕೃತ ಕಾನೂನು ಆಗಲಿದೆ.