HEALTH TIPS

ತಿರುವರನ್ಮುಲಯಪ್ಪನ್‍ಗೆ ಓಣಂ ಸದ್ಯದೊಂದಿಗೆ ತೆರಳಿದ ಮಂಗಾಟ್ ಭಟ್ಟತ್ತಿರಿ

ಕೊಟ್ಟಾಯಂ: ತಿರುವರನ್ಮುಲಯಪ್ಪನಿಗೆ ಓಣಂ ಖಾದ್ಯಗಳನ್ನು ಅರ್ಪಿಸಲು ಕುಮಾರನಲ್ಲೂರಿನಿಂದ ಮಂಗಾಟ್ ಭಟ್ಟತ್ತಿರಿ ಪ್ರಯಾಣ ಆರಂಭಿಸಿರುವರು. 

ಅನೂಪ್ ನಾರಾಯಣ ಭಟ್ಟತ್ತಿರಿ ಅವರು ಮಂಗಾಟ್ಟು ತೇವರಪುಳದಿಂದ(ದೇವರ ಹೊಳೆ) ರೋಲರ್ ಬೋಟ್‍ನಲ್ಲಿ ನಿನ್ನೆ ಬೆಳಿಗ್ಗೆ 11.30 ರ ಸುಮಾರಿಗೆ ಆರನ್ಮುಳಕ್ಕೆ ಹೊರಟರು. 

ವಿದ್ಯಾಸಾಗರ್ ವೈಲಪಲ್ಲಿ, ವಿನು ಎಂ. ನಾಯರ್ ಕುಂಬಳತ್  ಮತ್ತು ಸುಧೀಶ್ ಅಮ್ಮರೈಲ್ ಎಂಬ ಮೂವರು ಪ್ರತ್ಯೇಕ ದೋಣಿಯಲ್ಲಿ ಜೊತೆಯಲ್ಲಿದ್ದಾರೆ. ನಿನ್ನೆ ಸಂಜೆ ಚಕ್ಕುಳತುಕ್ವ ತಲುಪಿದರು. ಇಂದು ಬೆಳಗ್ಗೆ ತಿರುವಳ್ಳ ಮುವಾವತುಂ ಮಠದಲ್ಲಿ ಇದ್ದು, ಸಂಜೆ ಆರನ್ಮುಲ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದರು. ಬಳಿಕ ಸಂಜೆ 5 ಗಂಟೆಗೆ ಕತ್ತೂರು ತಲುಪಿದರು. ಕತ್ತೂರಿನ 18 ನಾಯರ್ ಮನೆತನದವರು ತಯಾರಿಸಿದ ಅನ್ನ ಮತ್ತು ಓಣಂ ಖಾದ್ಯಗಳಿಂದ ತಿರುವೋಣ ದೋಣಿಯನ್ನು ತುಂಬಿಸಲಾಗುತ್ತದೆ.

ಕಟ್ಟೂರು ಮಹಾವಿಷ್ಣುವಿನ ದೇವಸ್ಥಾನದಲ್ಲಿ ದೀಪಾರಾಧನೆಯ ನಂತರ ತಿರುವೋಣ ದೋಣಿ ಬೆಳಗಿದ ಭಧ್ರ ದೀಪದೊಂದಿಗೆ ಆರನ್ಮುಳಕ್ಕೆ ನಾಳೆ ಹೊರಡಲಿದೆ. ಕುಮಾರನಲ್ಲೂರಿನಿಂದ ಹಲವಾರು ಪುಟ್ಟ ದೋಣಿಗಳು ಮತ್ತು ಕರ್ಲಿಂಗ್ ಬೋಟ್ ತಿರುವೋಣ ದೋಣಿಯೊಂದಿಗೆ ತೆರಳುತ್ತವೆ. ಅಯಿರೂರು ಮನದಲ್ಲಿ(ಮನೆತನ) ರಾತ್ರಿ ಊಟದ ನಂತರ ವೇಚೂರ್ ವೈದ್ಯ ಮನೆಗೆ ಭೇಟಿ ನೀಡಿ, ತಿರುವೋಣ ದಿನದಂದು ಭಟ್ಟತ್ತಿರಿ ವಂಚಿ ಪಾಟಿನೊಂದಿಗೆ ಭೇಟಿಯಾಗಿ ತಿರುವೋಣ ದೋಣಿಯಿಂದ ಶ್ರೀಮಠಕ್ಕೆ ಕರೆದೊಯ್ಯಲಾಗುತ್ತದೆ, ಅವರು ಬೆಳಿಗ್ಗೆ ಆರನ್ಮುಲ ದೇವಸ್ಥಾನದ ಮಧುಕ್ಕಡಾವಳಿಗೆ ಆಗಮಿಸುತ್ತಾರೆ.

ಉತ್ತರಾಡ ದಿನದಂದು ಕತ್ತೂರು ಮಹಾವಿಷ್ಣುವಿನ ದೇವಸ್ಥಾನದಿಂದ ಬೆಳಗಿದ ಭದ್ರದೀಪವನ್ನು ಆರನ್ಮುಳ ದೇಗುಲದಲ್ಲಿ ಪ್ರತಿμÁ್ಠಪಿಸಲಾಗುತ್ತದೆ, ಮಧ್ಯಾಹ್ನ ಪೂಜೆಯ ನಂತರ ಗರ್ಭಗೃಹದ ಬಾಗಿಲು ಮುಚ್ಚಲಾಗುತ್ತದೆ.  ನಂತರ ಗಣೇಶ ಪೂಜೆಯ ನಂತರ ಮಂಟಪದಲ್ಲಿ ಓಣಂ ಏರಿಯಾಳನ್ನು(ಬಲಿ) ಬಡಿಸಲಾಗುತ್ತದೆ. ಓಣಂ ಖಾದ್ಯಗಳೊಂದಿಗೆ ವಿಶೇಷ ಭೋಜನ ತಯಾರಿಸಿ ಅರ್ಪಿಸಲಾಗುತ್ತದೆ. 

ಮಂಟಪದಲ್ಲಿ ನಡೆಯುವ ಎಲ್ಲಾ ಪೂಜೆಗಳಿಗೆ ಮಂಗಾಟ್ ಭಟ್ಟತ್ತಿರಿ ಅವರು ಉಪಸ್ಥಿತರಿರುವರು. ಓಣಂಸದ್ಯ(ವಿಶೇಷ ಊಟ) ಮತ್ತು ದೀಪಾರಾಧನೆಯ ನಂತರ ಭಟ್ಟತ್ತಿರಿಗಳು ಕುಮಾರನಲ್ಲೂರಿಗೆ ಹಿಂದಿರುಗುವ ಮೂಲಕ ಖರ್ಚು-ವೆಚ್ಚದ ಕಾಣಿಕೆ ನೀಡಿ ಉತ್ಸವ ಮುಕ್ತಾಯಗೊಳ್ಳುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries