ಎರ್ನಾಕುಳಂ: ವಿವಾದಿತ ತಿರುನಾವಯ-ತಾವನ್ನೂರ್ ಸೇತುವೆ ನಿರ್ಮಾಣದ ಕುರಿತು ಪ್ರಾಯೋಗಿಕ ಸಲಹೆಗಳನ್ನು ಒಳಗೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಮೆಟ್ರೋಮ್ಯಾನ್ ಇ ಶ್ರೀಧರನ್ ಕೇರಳ ಹೈಕೋರ್ಟ್‍ಗೆ ಮೊರೆ ಹೋಗಿದ್ದಾರೆ.
ತ್ರಿಮೂರ್ತಿ ದೇವಸ್ಥಾನಗಳಿಗೆ ಧಕ್ಕೆಯಾಗದಂತೆ ಭಾÀರತಪುಳಕ್ಕೆ ಅಡ್ಡಲಾಗಿರುವ ತಿರುವನಾಯ-ತಾವನ್ನೂರು ಸೇತುವೆಯನ್ನು ಪುನಃಸ್ಥಾಪಿಸಲು ಪರ್ಯಾಯ ಮತ್ತು ಪ್ರಾಯೋಗಿಕ ಮಾರ್ಗಗಳನ್ನು ಪರಿಗಣಿಸಲು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶ್ರೀಧರನ್ ಆರೋಪಿಸಿದರು.
ಪ್ರಸ್ತಾವಿತ ತಿರುನಾವಯ – ತಾವನ್ನೂರು ಸೇತುವೆಯು ಮಲಪ್ಪುರಂ ಜಿಲ್ಲೆಯ ತಿರುನವಾಯದಲ್ಲಿರುವ ವಿಷ್ಣು ದೇವಾಲಯವನ್ನು ಭಾÀರತಹೊಳೆಯ ಉತ್ತರ ದಂಡೆಯಲ್ಲಿ ಮತ್ತು ತಾವನ್ನೂರಿನ ಬ್ರಹ್ಮಾಶ್ರಮವನ್ನು ನದಿಯ ದಕ್ಷಿಣ ದಂಡೆಯಲ್ಲಿ ಪ್ರತ್ಯೇಕಿಸುತ್ತದೆ ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಇದು ಧಾರ್ಮಿಕ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಬೊಟ್ಟುಮಾಡಿದ್ದಾರೆ.
ಸೇತುವೆಯ ಉದ್ದೇಶಿತ ನಿರ್ಮಾಣ ಯೋಜನೆಯು ಕೇರಳ ಗಾಂಧಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಿವಂಗತ ಕೆ ಕೇಳಪ್ಪನ್ ಅವರ ಸಮಾಧಿಯನ್ನು ಅತಿಕ್ರಮಿಸುತ್ತದೆ. ಇದನ್ನು ತಪ್ಪಿಸಲು ಈ ಕ್ಷೇತ್ರದಲ್ಲಿ ಪರಿಣತರಾಗಿರುವ ಅರ್ಜಿದಾರರು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ತಾಂತ್ರಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದು ಅರ್ಜಿದಾರರು ಗಮನ ಸೆಳೆದರು. ದೇವಾಲಯಗಳು ಮತ್ತು ಐತಿಹಾಸಿಕ ರಚನೆಗಳಿಗೆ ಧಕ್ಕೆಯಾಗದಂತೆ ಸೇತುವೆಯನ್ನು ನಿರ್ಮಿಸಲು ಪರ್ಯಾಯ ಮತ್ತು ಪ್ರಾಯೋಗಿಕ ಸಲಹೆಗಳನ್ನು ಅವರು ತಮ್ಮ ಪತ್ರದಲ್ಲಿ ನೀಡಿದ್ದಾರೆ. ಅವರ ಪ್ರಸ್ತಾಪಗಳು ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಾಮಾಜಿಕ-ಧಾರ್ಮಿಕ ಸಮಸ್ಯೆಗಳನ್ನು ತಪ್ಪಿಸುತ್ತದೆ ಎಂದು ಅವರು ವಾದಿಸುತ್ತಾರೆ.
ಉದ್ದೇಶಿತ ಸೇತುವೆಯ ನಿರ್ಮಾಣವು ಸೆಪ್ಟೆಂಬರ್ 08, 2024 ರಂದು ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅವರು ಸೂಚಿಸಿದ ಪರ್ಯಾಯ ಜೋಡಣೆಯನ್ನು ಪರಿಗಣಿಸಲು ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಅವರ ಪರವಾಗಿ ವಕೀಲರಾದ ಸಜಿತ್ ಕುಮಾರ್ ವಿ, ವಿವೇಕ್ ಎವಿ ಮತ್ತು ಶ್ರೀಹರಿ ವಿ.ಎಸ್. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.