HEALTH TIPS

ಮನೆಮನೆಗಳಲ್ಲಿ ಗ್ರಂಥಾಲಯ: ಡಾ.ಮಾನಸ

                ಬದಿಯಡ್ಕ: ಕಾಸರಗೋಡು ಹಲವು ಮಹನೀಯರನ್ನು ಕಂಡಂತಹ ನಾಡು ಮಹಾಜನ ವರದಿ ಕೇಂದ್ರ ಸರ್ಕಾರದ ಬತ್ತಳಿಕೆಯಲ್ಲಿದೆ. ಅದು ಜಾರಿಯಾದಲ್ಲಿ ಕಾಸರಗೋಡಿಗೆ ನ್ಯಾಯ ದೊರಕುದು ಖಂಡಿತ ಕಾಸರಗೋಡಿನ ಕನ್ನಡಿಗರು ಗಡಿಭಾಗದಲ್ಲಿದ್ದರೂ ಭುವನೇಶ್ವರಿಯ ಸೇವೆ ಮಾಡುವವರಾಗಿದ್ದಾರೆ. ಕಾಸರಗೋಡಿ ನೆಲ ಮಾತ್ರ ಪವಿತ್ರವಲ್ಲ ಪ್ರತಿಯೊಂದು ಮನಸ್ಸು ಕೂಡ ಪ್ರಬುದ್ಧತೆಯನ್ನು ಹೊಂದಿದೆ ಪಾಂಡಿತ್ಯವನ್ನು ಹೊಂದಿದೆ ಅಂಥವರಲ್ಲೊಬ್ಬರು ಪೆರ್ಲ ಕೃಷ್ಣ ಭಟ್ಟ ಅಂತವರ ಸಂಸ್ಮರಣೆ ಕಾರ್ಯಕ್ರಮ ಓಣಂ ಹಬ್ಬದ ಜೊತೆಗೆ ಆಚರಿಸುವುದು ತುಂಬಾ ಖುಷಿ ನೀಡಿದೆ ಎಂದು ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದರು.

             ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಲಯ ನಾರಾಯಣೀಯಂನಲ್ಲಿ ಭಾನುವಾರ ನಡೆದ ಓಣಂ ಹಬ್ಬ-ಪೆರ್ಲ ಕೃಷ್ಣ ಭಟ್ ಸಂಸ್ಮರಣೆ ಉದ್ಘಾಟಿಸಿ ಅವರು ಮಾತನಾಡಿದರು.

               ಯಾವುದೇ ಸಭೆ ಸಮಾರಂಭಗಳಲ್ಲಿ ಬೊಕ್ಕೆಗಳನ್ನು ನೀಡದೆ ಪುಸ್ತಕಗಳನ್ನೇ ನೀಡಬೇಕೆಂಬುದು ಮುಖ್ಯಮಂತ್ರಿಗಳ ಆಶಯ ಆದರಿಂದ ಕನ್ನಡ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸುವುದು ಮುಖ್ಯಮಂತ್ರಿಗಳ ಆಶಯ. ಮನೆಗೊಂದು ಗ್ರಂಥಾಲಯ ಎಂಬ ಹೊಸ ಯೋಜನೆಯನ್ನು ಕಾರ್ಯಗತಗೊಳಿಸಲು ಯೋಜನೆ ರೂಪಿಸಿಕೊಂಡಿದ್ದೇವೆ ಅದಕ್ಕಾಗಿ ಮುಖ್ಯಮಂತ್ರಿಯ ಜೊತೆಗೆ ಮಾತನಾಡಿ ಮುಖ್ಯಮಂತ್ರಿ ಅವರ ಮನೆಯಿಂದಲೇ ಒಂದು ಗ್ರಂಥಾಲಯವನ್ನು ಪ್ರಾರಂಭ ಮಾಡಿ ಇಡೀ ಕರ್ನಾಟಕದಲ್ಲಿ 1 ಲಕ್ಷ ಗ್ರಂಥಾಲಯಗಳನ್ನು ಮನೆಗಳಲ್ಲಿ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಇಂತಹ ಸಂದರ್ಭದಲ್ಲಿ ಗಡಿ ಭಾಗದಲ್ಲಿರುವ ಕಾಸರಗೋಡಿದ ಜಿಲ್ಲೆ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಪುಸ್ತಕವನ್ನು ನೀಡಲಾಗುವುದು ಅದಕ್ಕೊಂದು ವಿಶೇಷ ಕಾರ್ಯಕ್ರಮ ಹೊಸ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.         

           ಮುಖ್ಯ ಅತಿಥಿಯಾಗಿ ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಮಾತನಾಡಿ ನಾರಾಯಣೀಯಂ ಒಂದು ಉತ್ತಮ ಸಂಸ್ಥೆಯಾಗಿ ಸಂಗೀತ ಕ್ಷೇತ್ರದ ಹಲವಾರು ವಿದ್ಯಾರ್ಥಿಗಳ ನಿರ್ಮಾಣಕ್ಕೆ ಜನಮನ್ನಣೆ ಗಳಿಸಿದೆ. ಇಲ್ಲಿ ಓಣಂ ಹಾಗೂ ಪೆರ್ಲ ಕೃಷ್ಣ ಭಟ್ ಸಂಸ್ಮರಣಾ ಕಾರ್ಯಕ್ರಮ ಮಾಡಿದು ಶ್ಲಾಘನೀಯ ವಿಷಯ ಎಂದು ಹೇಳಿದರು.

          ಅಖಿಲ ಕರ್ನಾಟಕ ಮಟ್ಟದಲ್ಲಿ ಕಾಸರಗೋಡಿನ ಹೆಸರನ್ನು ಸ್ಥಾಯಿಯಾಗಿಸಿದ ವಿದ್ವಾಂಸರಲ್ಲಿ ಪೆರ್ಲ ಕೃಷ್ಣ ಭಟ್ಟರೂ ಕೂಡ ಒಬ್ಬರು. ಬಡತನವನ್ನು ಸವಾಲಗಿರಿಸಿಕೊಂಡು ಹಲವಾರು ಭಾμÉಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದ ವಿದ್ವಾಂಸರು. ಹಲವಾರು ಕಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರಿಗೆ ಕೇರಳ ಸರಕಾರ ಉತ್ತಮ ಅಧ್ಯಾಪಕ ಪ್ರಶಸ್ತಿ ಲಭಿಸಿದೆ. ಅವರು ಒಬ್ಬ ಕವಿಗಳೂ ಆಗಿದ್ದರು. ಯಕ್ಷಗಾನ ಅರ್ಥ ಹೇಳುವುದರಲ್ಲೂ ಅವರದ್ದು ಮೇಲುಗೈ ಎಂದು ಡಾ.ಬೇ.ಸೀ. ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣದಲ್ಲಿ ಉಲ್ಲೇಖಿಸಿದರು.

           ವಿಶ್ವಾಸ್ ಜೈನ್ ಪದ್ಯಾರಬೆಟ್ಟುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ  ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೊಳಿಗೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ  ಸದಸ್ಯರಾದ ಎ ಆರ್ ಸುಬ್ಬಯ್ಯಕಟ್ಟೆ, ಉದ್ಯಮಿ ನಿತ್ಯಾನಂದ ಶೆಣೈ, ಆನಂದ ಕೆ ಮವ್ವಾರು, ಶ್ರೀನಿವಾಸ ಭಟ್ ಚಂದುಕೂಡ್ಲು, ಪೆರ್ಲ ಕೃಷ್ಣ ಭಟ್ ಅವರ ಪುತ್ರ ರಾಜಾರಾಂ ಪೆರ್ಲ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಬಂಧಕ ವಿನಯ್ ಭಟ್ ಉಪಸ್ಥಿತರಿದ್ದು ಶುಭಹಾರೈಸಿಸದರು. 

        ಪ್ರೊ.ಎ. ಶ್ರೀನಾಥ್, ಪೈವಳಿಕೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶೆಡ್ ಎ ಕಯ್ಯಾರ್, ಅಶ್ವತ್ ಲಾಲ್ಭಾಗ್, ಲತೀಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗೀಶ್ ಶರ್ಮ ಬಳ್ಳಪದವು ಪ್ರಾಸ್ತಾವಿಕ ಮಾತುಗಳನಾಡಿ ಸ್ವಾಗತಿಸಿದರು. ರವಿಂದ್ರ ಸ್ವಾಮಿ ವಂದಿಸಿದರು. ಪತ್ರಕರ್ತ ಅಖಿಲೇಶ್ ನಗಮುಗಂ ಕಾರ್ಯಕ್ರಮ ನಿರೂಪಿಸಿದರು. ವೀಣಾವಾದಿನಿಯ ವಿದ್ವಾನ್, ಯೋಗೀಶ್ ಶರ್ಮ ಬಳ್ಳಪದವು, ಮಂಜೇಶ್ವರ ಶಾಸಕ ಎ ಕೆ ಎಂ ಆಶ್ರಫ್  ಅವರನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು  ಶಾಲು. ಪೇಟವನ್ನು ಇಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ತಿರುವದಿರಕಳಿ, ಓಣಂ ಹಬ್ಬದ ಅಂಗವಾಗಿ ವಿಶೇಷ ಆಟಗಳು ನಾರಾಯಣಿಯಮ್ ವಿದ್ಯಾರ್ಥಿಗಳಿಂದ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries