ಬದಿಯಡ್ಕ: ಬದುಕಿನ ದಾರಿಯನ್ನು ತೋರಿಸುವ ದೇವರಿಗೆ ಪ್ರಿಯವಾದ ಕೆಲಸವನ್ನೇ ಜೀವನದಲ್ಲಿ ಮಾಡಿಕೊಂಡು ಬರಬೇಕು. ಶಿವನ ಶಕ್ತಿಯಿಂದ ಪೆರಡಾಲದಲ್ಲಿ ಉದಯಗೊಂಡ ಸಂಘಟನೆ ಇಂದು ಶಿವನಿಗೇ ಶಕ್ತಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಪಂಚಭೂತಗಳಲ್ಲಿ ಒಂದಾದ ಜಲವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇವರ ಕಾರ್ಯಕ್ಕೆ ದೇವರ ಅನುಗ್ರಹವಿರಲಿ ಎಂದು ತಂತ್ರಿವರ್ಯ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ನುಡಿದರು.
ಶಿವಶಕ್ತಿ ಪೆರಡಾಲ ಸಂಘಟನೆಯ ನೇತೃತ್ವದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ, ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು, ಆಡಳಿತ ಮಂಡಳಿ ಸದಸ್ಯರುಗಳಾದ ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಮಾಜಿ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ ಪೆರಡಾಲಗುತ್ತು, ವಾರ್ಡು ಸದಸ್ಯ ಶ್ಯಾಮಪ್ರಸಾದ ಮಾನ್ಯ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಜೀರ್ಣೋದ್ಧಾರ ಸಮಿತಿ ಜೊತೆಕಾರ್ಯದರ್ಶಿ ಉದಯಶಂಕರ ಪಿ.ಎಸ್., ಅಭಿಯಂತರ ರಾಮಚಂದ್ರ ಶಾಸ್ತ್ರಿ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಲೆಕ್ಕಪರಿಶೋಧಕ ಕುಞ್ಞಣ್ಣ ಬದಿಯಡ್ಕ, ಶಿವಶಕ್ತಿ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಕಾರ್ಯದರ್ಶಿ ಪುಟ್ಟನಾಯ್ಕ ಪೆರಡಾಲ, ಕೋಶಾಧಿಕಾರಿ ನವೀನ್ ಪಟ್ಟಾಜೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸೇವಾಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ನಿರೂಪಿಸಿದರು.