ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ವತಿಯಿಂದ ಬುಧವಾರ ಪಂಡಿತ ದೀನ್ ದಯಾಳ್ ಉಪದ್ಯಾಯರ ಜನ್ಮ ದಿನಾಚರಣೆ ಕುಂಬಳೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.
ಬಿಜೆಪಿ ಕೇರಳ ರಾಜ್ಯ ಕೌನ್ಸಿಲ್ ಸದಸ್ಯ ನ್ಯಾಯವಾದಿ ವಿ.ರವೀಂದ್ರನ್ ಅವರು ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಬಿಜೆಪಿ ಕುಂಬಳೆ ಘಟಕದ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಯುವಮೋರ್ಚ ಕುಂಬಳೆ ಪಂಚಾಯತಿ ಅಧ್ಯಕ್ಷ ಅಜಿತ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಜಯ್ ಎಂ, ಹಿರಿಯರಾದ ವೇಣುಗೋಪಾಲ್, ಶಶಿ ಕುಂಬಳೆ, ಗೋಪಾಲಕೃಷ್ಣ ಕಂಚಿಕಟ್ಟೆ, ಪ್ರಶಾಂತ್ ಪಿ.ಎಚ್. ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಾವತಿ ಕುಂಬಳೆ ಸ್ವಾಗತಿಸಿ, ಮೋಹನ ಬಂಬ್ರಾಣ ವಂದಿಸಿದರು.