ಕಾಸರಗೋಡು: ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗ ಹಾಗೂ ಸಮೀಪದ 32ನೇ ವಾರ್ಡಿನಲ್ಲಿ ಕಸ ಸಂಗ್ರಹಕ್ಕಾಗಿ ಸ್ಥಾಪಿಸಿರುವ ಮಿನಿ ಎಂಸಿಎಫ್‍ನಿಂದ ಹೊರಕ್ಕೆ ಸುರಿಯಲಾಗಿರುವ ತ್ಯಾಜ್ಯದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಸಿಬ್ಬಂದಿ ಕಸ ಸುರಿದ ಅಂಗಡಿಯವರನ್ನು ಪತ್ತೆಹಚ್ಚಿ ಮಾಲೀಕರಿಗೆ 10 ಸಾವಿರ ದಂಡ ವಿಧಿಸಿದ್ದಾರೆ.
ಈ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸುರಿಯಲಾಗಿರುವ ತ್ಯಜ್ಯವನ್ನು ಸ್ವಂತ ಖರ್ಚಿನಲ್ಲಿ ತೆಗೆದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಕೋ-ಆಪರೇಟಿವ್ ಸೊಸೈಟಿ ಕಟ್ಟಡದಲ್ಲಿನ ತ್ಯಾಜ್ಯವನ್ನು ತೆರೆದ ಜಾಗದಲ್ಲಿ ಸುರಿದ ಹಾಗೂ ಕೊಳಚೆನೀರು ಸಾಗುವಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಗಳಿಗೆ 5000 ದಂಡ ವಿಧಿಸಲಾಗಿದೆ. ಕೊಟ್ಟಕಣಿ ಕ್ರಾಸ್ ರಸ್ತೆಯ ತೋಡಿಗೆ ತಮ್ಮ ಮನೆಗಳಿಂದ ತ್ಯಾಜ್ಯ ನೀರು ಮತ್ತು ಪ್ಲಾಸ್ಟಿಕ್ ಸುರಿದ ಎರಡು ಮನೆ ಮಾಲೀಕರಿಗೆ ತಲಾ 5000 ರೂ. ದಂಡ ವಿಧಿಸಲಾಗಿದೆ.
ತಪಾಸಣೆಯಲ್ಲಿ ಜಾರಿ ದಳದ ನಾಯಕ ಕೆ.ವಿ.ಮುಹಮ್ಮದ್ ಮದನಿ, ಆರೋಗ್ಯ ನಿರೀಕ್ಷಕ ಅಂಬಿಕಾ ಟಿ, ನಿಧೀಶ್ ಪಿ.ಜಿ., ಸ್ಕ್ವಾಡ್ ಸದಸ್ಯರಾದ ಇ.ಕೆ.ಫಾಜಿಲ್, ಒ.ಪಿ.ವಿನೀಶ್ ಕುಮಾರ್ ಭಾಗವಹಿಸಿದ್ದರು.