ಕಾಸರಗೋಡು: ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಫ್ರೆಂಡ್‍ಶಿಪ್ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಹೆತ್ತವರು ಹಾಗೂ ಪೋಷಕರಿಗಾಗಿ"ಮಕ್ಕಳನ್ನು ತಿಳಿದುಕೊಳ್ಳಲು" ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎ. ಎನ್. ನಾರಾಯಣ್ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಸೌಹಾರ್ದ ಕ್ಲಬ್ ರಾಜ್ಯ ಸಂಪನ್ಮೂಲ ವ್ಯಕ್ತಿ ಡಿ. ದೀಪಾ ಪೆÇೀಷಕರಿಗೆ ತರಗತಿ ನಡೆಸಿದರು. ಶಾಲಾ ಪ್ರಾಂಶುಪಾಲ ಪಿ. ಪ್ರಭಾಕರನ್, ಡಾ, ಜಿ. ಕೆ. ಗೋಪೇಶ್, ವಿ. ಎಂ. ಸಾಜಿ, ಕೆ. ಪ್ರವೀಣ್ ಕುಮಾರ್, ಎ. ಎನ್. ಮಧುಸೂದನನ್, ರೋಷ್ನಾ, ಶಿಶಿರ, ಶ್ರುತಿ ಉಪಸ್ಥಿತರಿದ್ದರು. ಶಾಲಾ ಸೌಹಾರ್ದ ಕ್ಲಬ್ ಸಂಚಾಲಕ ಕೆ. ಎಸ್. ಅತಿರಾ ಸ್ವಾಗತಿಸಿದರು.