ಲಂಡನ್: ಕಟ್ಟಡಗಳು ಕಳಪೆಯಾಗಿರುವ ಬಗ್ಗೆ ಬಾಡಿಗೆದಾರರ ದೂರಿಗೆ ಪ್ರತಿಕ್ರಯಿಸಿದ ಬ್ರಿಟಿಷ್ ಸಿಖ್ ಸಂಸದ ಜಸ್ ಅತ್ವಾಲ್ ಅವರು ಕ್ಷಮೆಯಾಚಿಸಿದ್ದಾರೆ.
ಲಂಡನ್: ಕಟ್ಟಡಗಳು ಕಳಪೆಯಾಗಿರುವ ಬಗ್ಗೆ ಬಾಡಿಗೆದಾರರ ದೂರಿಗೆ ಪ್ರತಿಕ್ರಯಿಸಿದ ಬ್ರಿಟಿಷ್ ಸಿಖ್ ಸಂಸದ ಜಸ್ ಅತ್ವಾಲ್ ಅವರು ಕ್ಷಮೆಯಾಚಿಸಿದ್ದಾರೆ.
ಸಂಸದ ಜಸ್ ಅವರಿಗೆ ಸೇರಿದ ಬಾಡಿಗೆ ಕಟ್ಟಡಗಳಲ್ಲಿ ಶಿಲೀಂಧ್ರ ಮತ್ತು ಇರುವೆಗಳಿಂದ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಬಿಬಿಸಿ ಶುಕ್ರವಾರ ವರದಿ ಮಾಡಿತ್ತು.
'ನಾನು ಒಡೆತನದಲ್ಲಿರುವ 15 ಫ್ಲಾಟ್‌ಗಳ ನಿರ್ವಹಣೆಯನ್ನು ಏಜೆನ್ಸಿಗೆ ವಹಿಸಿದ್ದೇನೆ. ನನಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿರಲಿಲ್ಲ. ತಕ್ಷಣವೇ ದುರಸ್ಥಿ ಮತ್ತು ನಿರ್ವಹಣೆ ಕಾರ್ಯವನ್ನು ಮಾಡಿಸುತ್ತೇನೆ' ಎಂದು ಭರವಸೆ ನೀಡಿದರು.
ಜಸ್ ಒಡೆತನದ 7 ಫ್ಲಾಟ್‌ಗಳು ಪರವಾನಗಿ ಹೊಂದಿಲ್ಲ ಎಂದು ಬಿಬಿಸಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಯಿಸಿದ ಜಸ್ ಅವರು, 'ಮರುನೋಂದಣಿ ಕಾರ್ಯ ಪ್ರಗತಿಯಲ್ಲಿದೆ' ಎಂದು ತಿಳಿಸಿದ್ದಾರೆ.