ಮಲಪ್ಪುರಂ: ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮೇಲಿನ ಆರೋಪದ ಬೆನ್ನಲ್ಲೇ ಎಡ ಶಾಸಕ ಪಿ.ವಿ. ಅನ್ವರ್. ಅಜಿತ್ ಕುಮಾರ್ ಕುಖ್ಯಾತ ಕ್ರಿಮಿನಲ್ ಎಂದು ಹೇಳಿಕೆ ನೀಡಿದ್ದಾರೆ.
ಅವರು ಪೋಲೀಸ್ ಇಲಾಖೆಗೆ ಸೂಕ್ತ ವ್ಯಕ್ತಿ ಅಲ್ಲ. ಇದು ಜನರಿಗೆ ತಿಳಿದಿದೆ. ಹಾಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ತೃಶೂರ್ ಪೂರಂ ಕಲಕಿದ ವಿಚಾರದಲ್ಲಿ ತನಿಖೆಯನ್ನು ಬುಡಮೇಲುಗೊಳಿಸಿದ್ದರ ವಿರುದ್ಧದ ದೂರಿನ ಬಗ್ಗೆ ತನಿಖೆ ನಡೆಸಲು ಅವರಿಗೇ ಹೇಳಿರುವುದು ಖಂಡನಾರ್ಹ ಎಂದು ಪಿ.ವಿ.ಅನ್ವರ್ ಹೇಳಿದರು. ನಿನ್ನೆ ಅನ್ವರ್ ಬಹಿರಂಗ ಹೇಳಿಕೆ ನೀಡದಿರುವ ನಿರ್ಧಾರ ಪ್ರಕಟಿಸಿದ್ದರು. ಈ ನಿರ್ಧಾರವನ್ನು ಮರೆತು ಅನ್ವರ್ ಇಂದು ಮತ್ತೆ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಶಾಸಕ ಪಿ.ವಿ. ಅನ್ವರ್ ಅವರನ್ನು ಟೀಕಿಸಿದ ಮುಖ್ಯಮಂತ್ರಿ ಬಾಯಿಮುಚ್ಚಿರಲು ಸೂಚಿಸಿದ್ದರು. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರನ್ನು ಸದ್ಯ ಮುಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ಒಬ್ಬರು ಆರೋಪ ಮಾಡಿದ ಮಾತ್ರಕ್ಕೆ ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ತೆಗೆದುಹಾಕಬಹುದು ಎಂದು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಈ ಆರೋಪದ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಕಂಡು ಬಂದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು.