ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ತೀರ್ಥ ಕೆರೆಯ ಮುಂಭಾಗದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಕಣಿಪುರ ಶ್ರೀ ಗೋಪಾಲಕೃಷ್ಣ ಬೆಡಿ ಮಹೋತ್ಸವ ಸ್ವಯಂ ಸೇವಾ ಸಮಿತಿ ಕುಂಬಳೆ ಇವರ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶೀಟ್ ಹಾಕಿದ ಮೇಲ್ಛಾವಣಿ (sಶೀಟ್ ರೂಫಿಂಗ) ಕಾಮಗಾರಿಯು ಪೂರ್ಣಗೊಂಡಿದ್ದು, ಸೋಮವಾರ ಬೆಳಿಗ್ಗೆ ಸಮಿತಿಯ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ ದೇವಳದ ಅರ್ಚಕÀ ಗೋಪಾಲಕೃಷ್ಣ ಅಡಿಗಳು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡುವ ಮೂಲಕ ಶ್ರೀ ದೇವರಿಗೆ ಸಮರ್ಪಿಸಿಸಲಾಯಿತು. ಸಮಿತಿಯ ಪರವಾಗಿ ಸಮಿತಿಯ ಅಧ್ಯಕ್ಷ ನ್ಯಾಯವಾದಿ. ಕೆ ಸದಾನಂದ ಕಾಮತ್ ಪ್ರಸಾದ ಸ್ವೀಕರಿಸಿದರು.