ಕಾಸರಗೋಡು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಜೇಶ್ವರಂ ಗೋವಿಂದ ಪೈ ಸ್ಮಾರಕ ಕಾಲೇಜು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಪ್ರವಾಸೋದ್ಯಮ ಸಂವಾದ ಕಾರ್ಯಕ್ರಮ ಜರುಗಿತು.
ಜಿಲ್ಲಾಧಿಕಾರಿ ಇನ್ಬಾಶೇಖರ್ ಸಂವಾದ ಉದ್ಘಾಟಿಸಿದರು. ಪ್ರಾಂಶುಪಾಲ ಮಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು.
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಿಂಧು ಜೋಸೆಫ್, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಕಾರ್ಯಕ್ರಮ ಸಂಯೋಜಕ ಅಖಿಲ್ ದೇವ್ ಹಾಗೂ ಕಾಲೇಜು ಯೂನಿಯನ್ ಚೇರ್ಮನ್ ದಾವೂದ್ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸಿಂಧು ಜೋಸೆಫ್ ಸಮನ್ವಯಕಾರರಗಿ ಸಹಕರಿಸಿದರು. ಮೌಲವಿ ಟ್ರಾವಲ್ಸ್ ಹಾಗೂ ಹಾಲಿಡೇಸ್ ನಿರ್ದೇಶಕ ಅಬ್ದುಲ್ಲಾ, ಬೇಕಲ್ ಟೂರಿಸಂ ಫ್ರೆಟರ್ನಿಟಿ ಚೇರ್ಮನ್ ಸೈಫುದೀನ್ ಕಳನಾಡ್, ತಳತ್ತೂರು ಹೆರಿಟೇಜ್ ಹೋಮ್‍ಸ್ಟೇ ಮಾಲಕಿ ಶ್ಯಾಮಲಾ, ನೆಯ್ತಾರ್ ಗ್ರೀನ್ ಡೆಸ್ಟಿನೇಶನ್ ಏಷ್ಯಾ ಪೆಸಿಫಿಕ್ ಸಂಯೋಜಕ ಮಹದೇವನ್ ಪಿ, ಎಂ.ಎ.ಖಾದರ್ ಮತ್ತು ಟಿ.ಜಿ.ಗಂಗಾದರನ್ ಪ್ರವಾಸೋದ್ಯಮ ಉದ್ಯಮಶೀಲತೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರವಾಸೋದ್ಯಮದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಉದ್ಯೋಗಾವಕಾಶಗಳ ಹೊರತಾಗಿ ಉದ್ಯಮಶೀಲತೆಯ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದಾಗಿ ಉದ್ಯಮಶೀಲತೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.
:ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಪ್ರವಾಸೋದ್ಯಮ ಇಲಾಖೆಯು ಮಂಗಳೂರು-ಚೆನ್ನೈ ಸೂಪರ್‍ಫಾಸ್ಟ್ ಮೇಲ್ ರೈಲುಗಾಡಿಗೆ ಸಂಜೆವೇಳೆ ಮಂಜೇಶ್ವರದಲ್ಲಿ ನಿಲುಗಡೆಗೆ ಅನುವು ಮಾಡಿಕೊಡಲು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರಿಗೆ ಪ್ರಾಂಶುಪಾಲ ಮೊಹಮ್ಮದಾಲಿ ಹಸ್ತಾಂತರಿಸಿದರು.