HEALTH TIPS

ಸಾರ್ವಜನಿಕವಾಗಿ ಕಸ ಎಸೆಯುವವರ ವಿರುದ್ದ ಬಂದಿದೆ ದೂರು ನೀಡಲು ವಾಟ್ಸಾಪ್ ಸಂಖ್ಯೆ, ತಕ್ಷಣ ಕ್ರಮ

ತಿರುವನಂತಪುರ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುತ್ತಿರುವುದನ್ನು ಸ್ಥಳೀಯಾಡಳಿತ ಸಂಸ್ಥೆಗಳ ಗಮನಕ್ಕೆ ತರಲು ಮತ್ತು ಸಾರ್ವಜನಿಕ ಸ್ಥಳಗಳು ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ದೂರು ದಾಖಲಿಸಲು ವಾಟ್ಸ್‍ಪ್ ಸಂಖ್ಯೆ ವ್ಯವಸ್ಥೆಗೊಳ್ಳಲಿದೆ .

ಇನ್ನು ಮುಂದೆ ದೂರುಗಳನ್ನು ಪುರಾವೆಗಳೊಂದಿಗೆ 9446700800 ಗೆ ಕಳುಹಿಸಬಹುದು.

ಕೊಲ್ಲಂ ಕಾರ್ಪೋರೇಷನ್ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯಾಡಳಿತ  ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಅವರು ಸ್ವಚ್ಛತಾ ಹಿ ಸೇವಾ 2024 ಅಭಿಯಾನದ ರಾಜ್ಯಮಟ್ಟದ ಉದ್ಘಾಟನೆ ಮತ್ತು ಸಾರ್ವಜನಿಕ ವಾಟ್ಸಾಪ್ ಸಂಖ್ಯೆ ಪ್ರಕಟಣೆಯನ್ನು ನೆರವೇರಿಸಿದರು.

ಸಾರ್ವಜನಿಕ ವಾಟ್ಸಾಪ್ ಸಂಖ್ಯೆಯು ಸಾಮಾಜಿಕ ಲೆಕ್ಕಪರಿಶೋಧನೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ರಾಜ್ಯ ಮಟ್ಟದ ವಾರ್ ರೂಂನಲ್ಲಿ ಬಂದ ದೂರುಗಳನ್ನು ಸ್ಥಳೀಯಾಡಳಿತ  ಸಂಸ್ಥೆಗಳಿಗೆ ಕಳಿಸಲಾಗುತ್ತದೆ. ಕ್ರಮಗಳನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ, ಮೊದಲು ಕಲುಷಿತ ಪ್ರದೇಶವನ್ನು ಸ್ವಚ್ಛಗೊಳಿಸುವುದು ಮತ್ತು ಎರಡನೆಯದಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries