ಮಂಜೇಶ್ವರ: ವಿದೇಶದಿಂದ ಊರಿಗೆ ಆಗಮಿಸುವ ಮಧ್ಯೆ, ಭದ್ರತಾ ನಿರ್ದೇಶ ಉಲ್ಲಂಘಿಸಿ ವಿಮಾನದೊಳಗೆ ಸಿಗರೇಟ್ ಸೇದಿದ ಮಂಜೇಶ್ವರ ನಿವಾಸಿ ಮುಶಾದಿಕ್ ಹುಸೈನ್ ಎಂಬಾತನ ವಿರುದ್ಧ ಬಜ್ಪೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಬುದಾಬಿಯಿಂದ ಆ. 31ರಂದು ಆಗಮಿಸಿದ ಇಂಡಿಗೋ ಎಕ್ಸ್‍ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಈತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಅಲ್ಪ ಮೊದಲು ವಾಶ್‍ರೂಮ್‍ಗೆ ತೆರಳಿ ಸಿಗರೇಟ್ ಸೇದಿರುವ ಬಗ್ಗೆ ಅಧಿಕಾರಿಗಳು ದೂರು ನೀಡಿದ್ದರು.