ತ್ರಿಶೂರ್; ತ್ರಿಶೂರ್ ಪೂರಂಗೆ ತೊಂದರೆಯಾಗಿಲ್ಲ ಎಂದು ಎಡಿಜಿಪಿ ವರದಿ ಹೇಳಿದ್ದು, ಷಡ್ಯಂತ್ರ ನಡೆದಿರುವುದಕ್ಕೆ ಸಾಕ್ಷಿ ಇಲ್ಲ ಎಂದು ಎಡಿಜಿಪಿ ಸಲ್ಲಿಸಿರುವ ವರದಿಯಲ್ಲಿ ಹೇಳಿರುವುದು ನಗರ ಪೆÇಲೀಸ್ ಕಮಿಷನರ್ ಅಂಕಿತ್ ಅಶೋಕ್ ಅವರ ಸಮನ್ವಯ ವೈಫಲ್ಯ ಮಾತ್ರ ಎಂದು ಸೂಚಿಸಿದೆ.
"ಯಾವುದೇ ಬಾಹ್ಯ ಹಸ್ತಕ್ಷೇಪ ಇದ್ದಿರಲಿಲ್ಲ. ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ಆಯುಕ್ತರು ವಿಫಲರಾಗಿದ್ದಾರೆ. ಉನ್ನತ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಎಡಿಜಿಪಿ ವರದಿ ಪ್ರಕಾರ ವಿವಿಧೆಡೆ ಅನುಭವಿ ಕಡಿಮೆಯಿರುವ ಅಧಿಕಾರಿಗಳನ್ನು ನೇಮಿಸಲಾಗಿತ್ತು ಎಂದು ಹೇಳಲಾಗಿದೆ.
ಏತನ್ಮಧ್ಯೆ, ಡಿಜಿಪಿ ಇಂದು ತನಿಖಾ ವರದಿಯನ್ನು ಪರಿಶೀಲಿಸಲಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ, ಡಿಜಿಪಿ ತಮ್ಮದೇ ಆದ ಶಿಫಾರಸುಗಳನ್ನು ಬರೆಯುತ್ತಾರೆ. ಅದಾದ ಬಳಿಕ ನಾಳೆಯೇ ಮುಖ್ಯಮಂತ್ರಿಗೆ ಹಸ್ತಾಂತರಿಸುವ ಸೂಚನೆ ಇದೆ.
ಎಡಿಜಿಪಿ ವರದಿ ಪ್ರಕಾರ ವಿವಿಧೆಡೆ ಅನುಭವ ಕಡಿಮೆಯಿರುವ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ತನಿಖೆಗೆ ಆದೇಶಿಸಿದ 5 ತಿಂಗಳ ಬಳಿಕ ತನಿಖಾ ವರದಿಯನ್ನು ಡಿಜಿಪಿಗೆ ಹಸ್ತಾಂತರಿಸಲಾಗಿದೆ.