HEALTH TIPS

ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

 ವದೆಹಲಿ: ಮದ್ರಾಸ್ ಹೈಕೋರ್ಟ್‌ ಆದೇಶದಂತೆ 2002ರಲ್ಲಿ ತೆಗೆದುಹಾಕಲಾಗಿದ್ದ 'ಸುಡೋಮಿ ಮತ್ತು ಲೆಸ್ಬಿಯನಿಸಂ' ಎಂಬ ಪಾಠವನ್ನು ವೈದ್ಯಕೀಯ ಪದವಿ ಕೋರ್ಸ್‌ನ ಅಸಹಜ ಲೈಂಗಿಕ ಅಪರಾಧ ಎಂಬ ಪಾಠದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮರು ಪರಿಚಯಿಸಿದೆ.

ಇದರೊಂದಿಗೆ 'ಯೋನಿಪೊರೆ ಹಾಗೂ ಇತರ ಭಾಗಗಳು' ಎಂಬ ಪಠ್ಯವೂ ಮರುಸೇರ್ಪಡೆಗೊಂಡಿದೆ.

ಕನ್ಯತ್ವ ಮತ್ತು ಡಿಫ್ಲೋರೇಶನ್, ವೈದ್ಯಕೀಯ ಕಾನೂನು ಪ್ರಾಮುಖ್ಯತೆಯಂತ ವಿಷಯಗಳನ್ನು ಆಯೋಗ ಮರಳಿ ತಂದಿದೆ.

ಮದ್ರಾಸ್‌ ಹೈಕೋರ್ಟ್‌ನ ನಿರ್ದೇಶನದಂತೆ, ಈ ವಿಷಯಗಳನ್ನು 2022ರಲ್ಲಿ ಪಠ್ಯಕ್ರಮದಿಂದ ಕೈಬಿಡಲಾಗಿತ್ತು.

ಈ ಪರಿಷ್ಕೃತ ಪಠ್ಯವು ವಿಧಿವಿಜ್ಞಾನ ಹಾಗೂ ಟಾಕ್ಸಿಕಾಲಜಿ ವಿಭಾಗದಲ್ಲಿ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ಸಾಕ್ಷ್ಯ ಅಧಿನಿಯಮ (BSA), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ಪೊಲೀಸ್ ವಿಚಾರಣೆ ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ, ಅರಿಯಬಹುದಾದ ಮತ್ತು ಅರಿಯಲಾಗದ ಅಪರಾಧಗಳ ಕುರಿತ ಕಾನೂನು ಜ್ಞಾನ ಎಂಬ ಪಠ್ಯದಲ್ಲಿ ಸೇರಿಸಲಾಗಿದೆ.

ಲೈಂಗಿಕ ವಿಕೃತಿ, ಲೈಂಗಿಕ ಪ್ರಚೋದನೆ, ಕ್ರೌರ್ಯ, ಹೆಣಗಳನ್ನು ತಿನ್ನುವುದು, ಸ್ವಪೀಡನೆ, ಶವಸಂಭೋಗ ಮತ್ತಿತರ ವಿಷಯಗಳ ಕುರಿತು ಪಠ್ಯದಲ್ಲಿ ಸೇರಿಸಲಾಗಿದೆ. ಆದರೆ, 'ಕ್ವೀರ್‌'ಗಳ ನಡುವಿನ ಒಪ್ಪಿತ ಲೈಂಗಿಕತೆಯನ್ನು ಪಠ್ಯಕ್ರಮದಿಂದ ತೆಗೆದು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

ವೈದ್ಯಕೀಯ ಕಾನೂನು ಚೌಕಟ್ಟು, ನೀತಿ ಸಂಹಿತೆಗಳು, ವೈದ್ಯ ವೃತ್ತಿಯ ನೀತಿಗಳು, ವೃತ್ತಿಪರ ದುರ್ನಡತೆ ಮತ್ತು ವೈದ್ಯಕೀಯ ನಿರ್ಲಕ್ಷ್ಯ, ವೈದ್ಯಕೀಯ-ಕಾನೂನು ಪರೀಕ್ಷೆ ಮತ್ತು ದಾಖಲಾತಿಗಳ ಕುರಿತು ನೂತನ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಮಾಹಿತಿ ಪಡೆಯಲಿದ್ದಾರೆ. ವಿವಿಧ ವೈದ್ಯಕೀಯ-ಕಾನೂನು ಪ್ರಕರಣಗಳು ಮತ್ತು ಸಂಬಂಧಿತ ನ್ಯಾಯಾಲಯದ ತೀರ್ಪುಗಳು ಸೇರಿದಂತೆ ವೈದ್ಯಕೀಯ ವೃತ್ತಿಪರರಿಗೆ ಸಂಬಂಧಿಸಿದ ಇತ್ತೀಚಿನ ಕಾಯ್ದೆಗಳು ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ಎನ್‌ಎಂಸಿ ಹೇಳಿದೆ.

ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ಪಠ್ಯಕ್ರಮ (CBME)-2024ರ ಮಾರ್ಗಸೂಚಿ ಕುರಿತು ಪ್ರತಿಕ್ರಿಯಿಸಿರುವ ಎನ್‌ಎಂಸಿ, 'ಸದ್ಯ ಇರುವ ನಿಯಮಗಳು ಹಾಗೂ ಮಾರ್ಗಸೂಚಿಗಳಲ್ಲಿನ ವಿವಿಧ ಅಂಶಗಳನ್ನು ಮರುಪರಿಶೀಲಿಸುವ ಸಮಯ ಇದಾಗಿದೆ. ಬದಲಾಗುತ್ತಿರುವ ಜನ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಗ್ರಹಿಕೆ, ಮೌಲ್ಯ, ವೈದ್ಯಕೀಯ ಶಿಕ್ಷಣದಲ್ಲಿನ ಪ್ರಗತಿ ಹಾಗೂ ನಿರೀಕ್ಷೆಗಳಿಗೆ ಅನುಗುಣವಾಗಿ ಪಠ್ಯಕ್ರಮ ಇರಬೇಕು' ಎಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries