ತಿರುವನಂತಪುರಂ: ವಿವಾದಿತ ದೂರವಾಣಿ ಕರೆ ಕುರಿತು ಪತ್ತನಂತಿಟ್ಟ ಎಸ್ಪಿ. ಎಸ್.ಸುಜಿತ್ ದಾಸ್ ಅವರನ್ನು ಅಮಾನತುಗೊಳಿಸಿದ ಗೃಹ ಇಲಾಖೆ ಸುಜಿತ್ ದಾಸ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.
ಡಿಐಜಿ ಅಜಿತಾ ಬೇಗಂ ಸಿದ್ಧಪಡಿಸಿರುವ ವರದಿ ಪ್ರಕಾರ, ಶಾಸಕ ಪಿವಿ ಅನ್ವರ್ ಜೊತೆಗಿನ ಸಂಭಾಷಣೆ ಪೋಲೀಸರಿಗೆ ನಾಚಿಕೆ ತಂದಿದೆ ಮತ್ತು ಎಸ್ಪಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ವರದಿಯನ್ನು ಡಿಜಿಪಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಇದರ ಪ್ರಕಾರ ಎಸ್.ಸುಜಿತ್ ದಾಸ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಶಾಸಕ ಪಿ.ವಿ.ಅನ್ವರ್ ಬಹಿರಂಗ ಪಡಿಸಿರುವ ವಿಷಯ ಪೋಲೀಸ್ ಹಾಗೂ ಗೃಹ ಇಲಾಖೆಗೆ ತಲೆನೋವಾಗಿರುವಾಗಲೇ ಎಸ್ಪಿ ಸುಜಿತ್ ದಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ದೂರು ಹಿಂಪಡೆಯುವಂತೆ ಶಾಸಕರಿಗೆ ಹೇಳಿದ್ದು ತಪ್ಪು ಎಂದು ಎಸ್ಪಿಯಿಂದ ವರದಿ ಬಂದಿದ್ದು, ಆಡಿಯೋ ಬಿಡುಗಡೆ ಮಾಡಿರುವುದು ಪೆÇಲೀಸ್ ಪಡೆಗೆ ಮುಜುಗರ ಉಂಟು ಮಾಡಿದೆ.
ಶಾಸಕ ಪಿ.ವಿ.ಅನ್ವರ್ ಜತೆಗಿನ ದೂರವಾಣಿ ಸಂಭಾಷಣೆ ಬಹಿರಂಗವಾಗಿದೆ. ದೂರನ್ನು ಹಿಂಪಡೆಯುವಂತೆ ಸುಜಿತ್ ದಾಸ್ ಪಿವಿ ಅನ್ವರ್ ಅವರನ್ನು ಬೇಡಿಕೊಂಡ ಆಡಿಯೋವೊಂದು ಹೊರಬಿದ್ದಿದೆ.