HEALTH TIPS

ಸಮರಸ ಸುದ್ದಿಯ ನೂತನ ‘ವಾರಿಧಿ’ ಇ-ಪತ್ರಿಕೆ ಬಿಡುಗಡೆ: ಮಾಧ್ಯಮ ಕ್ಷೇತ್ರ ಸ್ವಸ್ಥಸಮಾಜದ ಕೈದೀವಿಗೆಗಳು: ಶ್ರೀಸಚ್ಚಿದಾನಂದ ಭಾರತೀ ಶ್ರೀಗಳಿಂದ ಅನುಗ್ರಹ ನುಡಿ

ಬದಿಯಡ್ಕ: ಡಿಜಿಟಲ್ ಸುದ್ದಿ ಮಾಧ್ಯಮವಾಗಿ ಬೆಳೆದುಬಂದಿರುವ ಸಮರಸ ಸುದ್ದಿ, ಇ-ಪತ್ರಿಕಾ ಆವೃತ್ತಿ ಆರಂಭಿಸಿರುವುದು ಶ್ಲಾಘನೀಯ. ವರ್ತಮಾನದ ವಿವಿಧ ವಿಚಾರಗಳಿಗೆ ಸಂಬಂಧಿಸಿ ಜನರೆಡೆಗಳಿಗೆ ವಿಷಯಗಳನ್ನು ತಲಪಿಸುವಲ್ಲಿ, ಚರ್ಚೆಗಳನ್ನು ಹುಟ್ಟುಹಾಕಿ, ಬದಲಾವಣೆಗಳಿಗೆ ಎಡೆಮಾಡುವ ಮಾಧ್ಯಮ ಕ್ಷೇತ್ರ ಸ್ವಸ್ಥ ಸಮಾಜದ ಕೈದೀವಿಗೆಗಳು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

ಆನ್ ಲೈನ್ ಸುದ್ದಿ ಮಾಧ್ಯಮವಾದ ಸಮರಸ ಸುದ್ದಿ ಪ್ರಕಟಿಸುವ ‘ವಾರಿಧಿ’ ಇ-ಪತ್ರಿಕೆಯ ಮೊದಲ ಆವೃತ್ತಿಯನ್ನು ಇಂದು ಬೆಳಿಗ್ಗೆ ಶ್ರೀಮಠದ ಗುರುಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು, ಸಾಹಿತಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು, ನಿವೃತ್ತ ವಾಯುಸೇನಾನಿ ತಿರುಮಲೇಶ್ವರ ಭಟ್ ಪಜ್ಜ, ಸಮರಸ-ವಾರಧಿ ಪ್ರಧಾನ ಸಂಪಾದಕಿ ಅಕ್ಷತಾ ಭಟ್ ಪುದುಕೋಳಿ, ಕಾರ್ಯನಿರ್ವಾಹಕ ಸಂಪಾದಕ ಪುರುಷೋತ್ತಮ ಭಟ್ ಕೆ, ಪೃಥ್ವಿನ್ ಕೃಷ್ಣ ಪುದುಕೋಳಿ ಉಪಸ್ಥಿತರಿದ್ದರು.


ಸಮರಸ ಬಳಗ |ಆರಂಭಿಸಿರುವ ಇ-ಮಾಸಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಕಾಸರಗೋಡಿನ ಶಿಕ್ಷಣ ಕ್ಷೇತ್ರದ ವರ್ತಮಾನದ ತಲ್ಲಣಗಳ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚಿಸಲಾಗಿದೆ. ಹಿರಿಯ ಸಾಹಿತಿ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಡಾ.ರಮಾನಂದ ಬನಾರಿ, ಆಕಾ|ಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ ಡಾ.ವಸಂತಕುಮಾರ ಪೆರ್ಲ, ಹಿರಿಯ ಶಿಕ್ಷಣ ತಜ್ಞ, ತರಬೇತುದಾರ ಕೃಷ್ಣ ಆಳ್ವ ಅನಂತಪುರ, ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ,ವಿದ್ಯಾಸಂಸ್ಥೆಗಳ ಪ್ರಬಂಧಕ ಶ|ಂಕರನಾರಾಯಣ ಭಟ್ ಎನ್, ಯು.ಎನ್.ಒ(ಯುಕ್ತರಾಷ್ಟ್ರ ಸಮಿತಿ)ದ ಜಿನೇವಾದ ಪ್ರಧಾನ ಕಾರ್ಯಾಲಯದಲ್ಲಿ ಯುರೋಪಿಯನ್ ಆರ್ಥಿಕ ವಲಯದ ವಿಜ್ಞಾನಿ ಕೇರಳೀಯರಾದ ಹರಿತುಳಸಿ,ಆರ್ಥಿಕ-ವ್ಯಾಪಾರ ಕ್ಷೇತ್ರದ ತಜ್ಞ, ಸಾಹಿತಿ ರಂಗಾ ಶರ್ಮ ಉಪ್ಪಂಗಳ ಅವರು ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಸಾಹಿತಿ, ವಿಮರ್ಶಕಿ ಚೇತನಾ ಕುಂಬ್ಳೆಯವರ ಪುಸ್ತಕ ವಿಮರ್ಶೆ, ವಿದ್ಯಾಥಿರ್|ನಿ ಕೆ.ಶಿವಾನಿಯವರ ಕವನಗಳು ಪುಟಗಳನ್ನು ಶ್ರೀಮಂತಗೊಳಿಸಿದೆ.  ಓದುಗರು ಮೆಚ್ಚಿ ಬೆಂಬಲಿಸಬೇಕೆಂಬ ನಿರೀಕ್ಷೆ ಬಳಗದ್ದು. 



                                                              

                         
  

                              





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries