ತಿರುವನಂತಪುರಂ: ವಿವಾದಗಳ ನಡುವೆಯೇ ರಜೆ ಅರ್ಜಿ ಹಿಂಪಡೆದ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಸರ್ಕಾರಕ್ಕೆ ಪತ್ರ ನೀಡಿದ್ದಾರೆ. 14ರಿಂದ 17ರವರೆಗೆ ಕುಟುಂಬ ಸಮೇತ ಚೆನ್ನೈಗೆ ತೆರಳಲು ರಜೆ ಅರ್ಜಿ ಸಲ್ಲಿಸಲಾಗಿತ್ತು.
ಪೋಲೀಸ್ ಪ್ರಧಾನ ಕಚೇರಿಯಲ್ಲಿ ಭಾರೀ ವಿವಾದಗಳು ನಡೆದ ನಂತರ ಅಜಿತ್ ಕುಮಾರ್ ರಜೆ ಹಿಂಪಡೆಯಲು ಅರ್ಜಿ ಸಲ್ಲಿಸಿದರು. ಪೋಲೀಸರ ವಿರುದ್ಧ ಶಾಸಕ ಪಿ.ವಿ ಅನ್ವರ್ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಮಲಪ್ಪುರಂ ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಎಸ್. ಶಶಿಧರನ್ ಸೇರಿದಂತೆ ಉನ್ನತ ಪೆÇಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಆರೋಪ ಹೊತ್ತಿರುವ ಅಜಿತ್ ಕುಮಾರ್ ಸದ್ಯ ಯಾವುದೇ ಬದಲಾವಣೆಗಳಿಲ್ಲದೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಆರೋಪ ಕೇಳಿ ಬಂದ ತಕ್ಷಣ ಎಂ.ಆರ್. ಅಜಿತ್ ಕುಮಾರ್ ಅವರನ್ನು ಕಾನೂನು ಸುವ್ಯವಸ್ಥೆ ಇಲಾಖೆಯಿಂದ ವರ್ಗಾವಣೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದಕ್ಕಾಗಿ ಪೋಲೀಸ್ ಮುಖ್ಯಸ್ಥರ ಕಚೇರಿಯಿಂದಲೂ ಟಿಪ್ಪಣಿ ಸಿದ್ಧಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಜೊತೆ ಚರ್ಚಿಸಿ ಬದಲಾವಣೆ ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು. ವಾಪಸಾಗುವ ಮುನ್ನ ಪೋಲೀಸ್ ಮುಖ್ಯಸ್ಥರ ನೇತೃತ್ವದ ತನಿಖಾ ತಂಡದ ವರದಿಯನ್ನು ಸಲ್ಲಿಸುವ ಸಾಧ್ಯತೆಯೂ ಇದೆ.
ಶಾಸಕ ಅನ್ವರ್ ಅವರ ಹೇಳಿಕೆಯನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಪೋಲೀಸ್ ಮುಖ್ಯಸ್ಥರಿಗೆ ತಲುಪಿಸುವ ಸಾಧ್ಯತೆಯ ಸೂಚನೆಯೂ ಇದೆ.