ಕೋಝಿಕ್ಕೋಡ್: ಭರತ ಹೊಳೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ತವನೂರು-ತಿರುಣಾವಯ ಸೇತುವೆಯ ಜೋಡಣೆಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ವಿಶ್ವವಿಖ್ಯಾತ ತಾಂತ್ರಿಕ ತಜ್ಞ ಮೆಟ್ರೋಮ್ಯಾನ್ ಇ.ಶ್ರೀಧರನ್ ಅವರು ಹೈಕೋರ್ಟ್‍ನಲ್ಲಿ ರಿಟ್ ಸಲ್ಲಿಸಿದ್ದಾರೆ.
ಸೇತುವೆಯ ಜೋಡಣೆಯನ್ನು ಬದಲಾಯಿಸಿದರೆ, ನಿರ್ಮಾಣ ವೆಚ್ಚವು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಬಹುದು ಮತ್ತು ಭರತ ಹೊಳೆಯ ದಡದಲ್ಲಿರುವ ಸಾಂಸ್ಕøತಿಕ ಸ್ಮಾರಕಗಳು ನಾಶವಾಗುವುದಿಲ್ಲ ಎಂದು ಮನವಿಯಲ್ಲಿ ಗಮನಸೆಳೆದಿದ್ದಾರೆ. ಸೇತುವೆಯ ಪ್ರಸ್ತುತ ಜೋಡಣೆಯನ್ನು ಬದಲಾಯಿಸಿದರೆ ಬಲಿತರ್ಪಣದ ಪವಿತ್ರ ಸ್ಥಳವಾದ ತ್ರಿಮೂರ್ತಿ ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಇ.ಶ್ರೀಧರನ್ ಬೊಟ್ಟುಮಾಡಿದ್ದು, ಗುರುವಾಯೂರ್ ರೈಲು ಮಾರ್ಗದ ಬಗೆಗೂ ಶ್ರೀಧರನ್ ಅರ್ಜಿಯಲ್ಲಿ ವಿವರಿಸಿದ್ದಾರೆ.
2016ರ ಅಕ್ಟೋಬರ್‍ನಲ್ಲಿ ಈ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಸೇತುವೆಯ ನಿರ್ಮಾಣ ವಿಧಾನ ಮತ್ತು ಜೋಡಣೆಯ ಬಿಡುಗಡೆಯೊಂದಿಗೆ, ಇ. ಶ್ರೀಧರನ್ ಅವರು ಸೆಪ್ಟೆಂಬರ್ 19, 2022 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.
ಸೇತುವೆ ನಿರ್ಮಾಣದಲ್ಲಿ ಪರಿಗಣಿಸಬೇಕಾದ ತಾಂತ್ರಿಕ ಅಂಶಗಳನ್ನು ಮತ್ತು ವೆಚ್ಚವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಇ.ಶ್ರೀಧರನ್ ವರದಿ ವಿವರಿಸಿದೆ. ಆದರೆ ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಂತರ ಲೋಕೋಪಯೋಗಿ ಇಲಾಖೆ ಹಾಗೂ ಇಲಾಖಾ ಸಚಿವ ಮುಹಮ್ಮದ್ ರಿಯಾಝ್ ಅವರಿಗೆ ಪತ್ರ ರವಾನಿಸಿದರು. ಯಾವುದೇ ಉತ್ತರವೂ ಬಾರದಿದ್ದಾಗ ಫೆÉಬ್ರವರಿ 18, 2023 ರಂದು ಜ್ಞಾಪನೆ ಪತ್ರವನ್ನು ಕಳುಹಿಸಲಾಗಿದೆ. ಅದಕ್ಕೂ ಪ್ರತಿಕ್ರಿಯಿಸಲಿಲ್ಲ. ನಂತರ ಆಗಸ್ಟ್ 24, 2024 ರಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ದೇಶದ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಇ. ಶ್ರೀಧರನ್ ಅವರ ಪತ್ರವಾಗಲಿ, ಮನವಿಗಳಾಗಲಿ ರಾಜ್ಯ ಸರ್ಕಾರ ಗಮನಹರಿಸಲಿಲ್ಲ. ಪ್ರತಿಭಟನೆ ಮತ್ತು ಸಲಹೆಗಳನ್ನು ನಿರ್ಲಕ್ಷಿಸಿ, ಸೇತುವೆಯ ನಿರ್ಮಾಣವನ್ನು ಸೆಪ್ಟೆಂಬರ್ 8 ರಂದು ಉದ್ಘಾಟಿಸಲಾಯಿತು.
ಸಾರ್ವಜನಿಕರು ಮತ್ತು ಹಿಂದೂ ಐಕ್ಯವೇದಿಯಂತಹ ಸಂಘಟನೆಗಳು ದೀರ್ಘಕಾಲ ಪ್ರತಿಭಟನೆ ನಡೆಸಲು ಸರ್ಕಾರ ಅವಕಾಶ ನೀಡಲಿಲ್ಲ. ನಿರ್ಮಾಣ ಕಾರ್ಯದ ಭಾಗವಾಗಿ ಕೇರಳ ಗಾಂಧಿ ಕೇಳಪ್ಪಾಜಿಯವರ ಸ್ಮರಣೆ ಇರುವ ತವನೂರಿನ ಸರ್ವೋದಯ ಸಂಗಮ ಸ್ಮಾರಕವನ್ನು ನೆಲಸಮಗೊಳಿಸಿ ಸ್ಥಳಾಂತರಿಸಲಾಗಿದೆ.
ಸರ್ಕಾರ ನಿಗದಿಪಡಿಸಿದ ಸೇತುವೆಯ ಮಾರ್ಗವನ್ನು 200 ಮೀಟರ್ ಒಂದು ಬದಿಗೆ ಬದಲಾಯಿಸಿದರೆ ಕೇರಳ ಗಾಂಧಿ ಕೆ. ಕೇಳಪ್ಪನ್ ಸಮಾಧಿಯ ಐತಿಹಾಸಿಕ ಸ್ಥಳ ಮತ್ತು ತ್ರಿಮೂರ್ತಿ ದೇವಾಲಯದ ಪವಿತ್ರ ಸ್ಥಳವನ್ನು ಸಂರಕ್ಷಿಸಬಹುದು.
ತವನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸಿಪಿಎಂ ಮುಖಂಡರು ಒಗ್ಗೂಡಿ, ಶ್ರೀಧರನ್ ಅವರನ್ನು ರಸ್ತೆಯಲ್ಲಿ ನಿಲ್ಲಿಸಿ, ಅವರು ಭಿಕ್ಷೆ ಬೇಡುತ್ತಿರುವರು ಎಂದು ವಿವರಿಸಿ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಜನರು ಇದು ಶ್ರೀಧರನ್ ಅವರ ವಿರುದ್ಧ ಎಂದು ತೋರಿಸಲು ಮತ್ತು ಅವರನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸಲು. ಇದು ಪರೋಕ್ಷ ರಾಜಕೀಯ ಬೆದರಿಕೆಯೂ ಆಗಿತ್ತು. ಆದರೆ 'ಜೀವ ಬೆದರಿಕೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ, ತಾನು ಹೇಳಬೇಕಾದ್ದನ್ನು ಹೇಳಿರುವೆ. ಮತ್ತು ನಾನು ಹೇಳಬೇಕಾದುದನ್ನು ಮಾತ್ರ ಹೇಳಿದ್ದೇನೆ' ಎಂದು ಇ. ಶ್ರೀಧರನ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಐತಿಹಾಸಿಕ ಸ್ಮಾರಕಗಳನ್ನು ನಾಶಪಡಿಸುವ ಮತ್ತು ಪವಿತ್ರ ಸ್ಥಳಗಳನ್ನು ನಾಶಪಡಿಸುವ ಚಟುವಟಿಕೆಗಳಿಗೆ ಮುಂದಾದಾಗ. ಶ್ರೀಧರನ್ ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.