ಪೆರ್ಲ: ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಖಾಸಗಿ ಬಸ್ ಸಂಚಾರ ಸೆ. 7ರಿಂದ(ಇಂದಿನಿಂದ) ಆರಂಭಗೊಳ್ಳಲಿದೆ. ಕುಂಬಳೆಯಿಂದ ಸೀತಾಂಗೋಳಿ, ಪೆರ್ಮುದೆ, ಬಾಯಾರು, ಮುಳಿಗದ್ದೆ, ಅಡ್ಯನಡ್ಕ, ಪೆರ್ಲ ಹಾದಿಯಾಗಿ ಉಕ್ಕಿನಡ್ಕ ಆಸ್ಪತ್ರೆ ತೆರಳುವ ಬಸ್, ಅಲ್ಲಿಂದ ಇದೇ ರೂಟಲ್ಲಿ ಕುಂಬಳೆಗೆ ಸಂಚರಿಸಲಿದೆ. ಪೆರ್ಲದ ಮಹಾಲಕ್ಷ್ಮೀ ಸಂಸ್ಥೆ ಬಸ್ ಸೌಕರ್ಯ ಒದಗಿಸಿದೆ.