HEALTH TIPS

ಆನ್‍ಲೈನ್ ವಂಚನೆ ತಡೆ ಕಾರ್ಯಕ್ರಮ: ಅಮಿತ್ ಶಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ರಾಜ್ಯ ಪೋಲೀಸ್ ಮುಖ್ಯಸ್ಥ

ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‍ಲೈನ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೂರ್ವಭಾವಿ ಕಾರ್ಯನಿರ್ವಹಣೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಪೋಲೀಸರಿಗೆ ಕೇಂದ್ರ ಗೃಹ ಸಚಿವಾಲಯದ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್, ಸೈಬರ್ ಆಪರೇಷನ್ ವಿಂಗ್ ಎಸ್ಪಿ ಹರಿಶಂಕರ್ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.

ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಕೇರಳ ಪೋಲೀಸರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 27,680 ಬ್ಯಾಂಕ್ ಖಾತೆಗಳು, 11,999 ಸಿಮ್ ಕಾರ್ಡ್‍ಗಳು ಮತ್ತು ವಂಚನೆಗೆ ಬಳಸಲಾದ 17,734 ವೆಬ್‍ಸೈಟ್‍ಗಳನ್ನು ಸೈಬರ್ ವಿಭಾಗದ ಅಡಿಯಲ್ಲಿ ಸೈಬರ್ ಫ್ರಾಡ್ ಮತ್ತು ಸೋಶಿಯಲ್ ಮೀಡಿಯಾ ವಿಂಗ್ ನಿಷ್ಕ್ರಿಯಗೊಳಿಸಿದೆ. 8,369 ಸಾಮಾಜಿಕ ಮಾಧ್ಯಮ ಪೆÇ್ರಫೈಲ್‍ಗಳು ಮತ್ತು 537 ನಕಲಿ ಮೊಬೈಲ್ ಅಪ್ಲಿಕೇಶನ್‍ಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ವಿದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಆನ್‍ಲೈನ್ ಹಣಕಾಸು ವಂಚನೆ ಕೇಂದ್ರಗಳಿಗೆ ಭಾರತದ ಜನರನ್ನು ನೇಮಿಸಿಕೊಳ್ಳುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ 17 ಪ್ರಕರಣಗಳು ದಾಖಲಾಗಿವೆ. 51 ಏಜೆಂಟರ ಚಲನವಲನಗಳನ್ನು ಪತ್ತೆ ಹಚ್ಚಲಾಗಿದ್ದು, 16 ಮಂದಿಯನ್ನು ಬಂಧಿಸಲಾಗಿದೆ.

ಇಂಟರ್‍ನೆಟ್‍ನಲ್ಲಿ ಮಕ್ಕಳ ನಗ್ನ ಚಿತ್ರಗಳನ್ನು ಹುಡುಕಿ ಸಂಗ್ರಹಿಸುವವರ ಪತ್ತೆಗಾಗಿ ನಡೆಸಿದ ಆಪರೇಷನ್ ಪಿ ಹಂಟ್‍ನ ವಿವಿಧ ಹಂತಗಳಲ್ಲಿ 395 ಪ್ರಕರಣಗಳು ದಾಖಲಾಗಿದ್ದು, 37 ಜನರನ್ನು ಬಂಧಿಸಲಾಗಿದೆ. 2347 ತಪಾಸಣೆಯಲ್ಲಿ 881 ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆನ್‍ಲೈನ್ ಆರ್ಥಿಕ ಅಪರಾಧಗಳನ್ನು ವರದಿ ಮಾಡಲು ಸಹಾಯವಾಣಿ ಸಂಖ್ಯೆ 1930 2023 ರಲ್ಲಿ 23,748 ದೂರುಗಳನ್ನು ಸ್ವೀಕರಿಸಿದೆ. ವಂಚನೆಯಿಂದ ಕಳೆದುಕೊಂಡ 201 ಕೋಟಿ ರೂ.ಗಳಲ್ಲಿ 37 ಕೋಟಿ ರೂ. ಈ ವರ್ಷದ ಆಗಸ್ಟ್ ವರೆಗೆ 27,723 ದೂರುಗಳು ಬಂದಿದ್ದು, 514 ಕೋಟಿ ರೂ.ಗಳಲ್ಲಿ 70 ಕೋಟಿ ರೂ.ಗಳನ್ನು ವಸೂಲಿ ಮಾಡುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಸೈಬರ್ ಅಪರಾಧ ಪತ್ತೆಯನ್ನು ಸುಧಾರಿಸಲು 1,000 ಕ್ಕೂ ಹೆಚ್ಚು ಪೋಲೀಸ್ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಸಬ್ ಇನ್ಸ್ ಪೆಕ್ಟರ್ ಮತ್ತು ಇನ್ಸ್ ಪೆಕ್ಟರ್ ಶ್ರೇಣಿಯ 360 ಪೆÇಲೀಸರಿಗೆ ಮೂರು ಹಂತಗಳಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಕೇಂದ್ರ ಸರ್ಕಾರ ನಡೆಸುವ ಆರು ತಿಂಗಳ ಅವಧಿಯ ಸೈಬರ್ ಕಮಾಂಡೋ ಕೋರ್ಸ್‍ಗೆ ಕೇರಳ ಪೆÇಲೀಸರಿಂದ 24 ಪೆÇಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries