HEALTH TIPS

ಸಮಸ್ಯೆ ಸೃಷ್ಟಿಸಿದ ಬೀಡಾಡಿ ಹಸುಗಳು

              ಮಂಜೇಶ್ವರ: ಮಂಜೇಶ್ವರದ ವಿವಿಧ ಸಾರ್ವಜನಿಕ ಸ್ಥಳಗಳು, ರಸ್ತೆಗಳು ಹಾಗೂ ಜನ ನಿಬಿಡ ಪ್ರದೇಶಗಳಲ್ಲಿ ಬೀಡಾಡಿ ಹಸುಗಳು ಅಡ್ಡಾಡುತ್ತಿರುವುದು ಸಮಸ್ಯೆಯಾಗಿ ತಲೆದೋರಿದೆ. ದನಗಳು ಬೀದಿಗಳಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದು, ಸಂಚಾರದ ಸವಾಲುಗಳನ್ನು ಉಂಟು ಮಾಡುತ್ತಿವೆ. ಅನೇಕ ವಾಹನ ಸವಾರರು ಹಾಗೂ ಪಾದಚಾರಿಗಳು ದನಗಳ ಹಠಾತ್ ಪ್ರವೇಶದಿಂದ ಅಪಘಾತಗಳಿಗೆ ಗುರಿಯಾಗುತಿದ್ದಾರೆ.

              ಈಗಾಗಲೇ ಆಮೆಗತಿಯನ್ನೇ ನಾಚಿಸುವ ಹೆದ್ದಾರಿ ಕಾಮಗಾರಿಯಿಂದ ಸಂಚಾರ ಅವ್ಯವಸ್ಥೆ ಸೃಷ್ಟಿಯಾಗಿರುವ ಬೆನ್ನಲ್ಲೇ ಹಸುಗಳ ಸಂಚಾರ ಕಳವಳ ಮೂಡಿಸಿದೆ. ಮಂಜೇಶ್ವರದ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು, ಹಾಗೂ ಬಸ್ ನಿಲ್ದಾಣಗಳಲ್ಲಿ ದನಗಳ ನಿರಂತರ ಹಾದುಹೋಗುವಿಕೆ ಹಾಗೂ ಠಿಕಾಣಿ ಹೂಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಜನಸಮೂಹವಿರುವ ಪ್ರದೇಶಗಳಲ್ಲಿ ದನಗಳ ತಿರುಗಾಟವು ಇನ್ನಷ್ಟು ಅಪಾಯಕಾರಿಯಾಗಿದ್ದು, ಜನರ ಸುರಕ್ಷತೆಗೆ ದೊಡ್ಡ ಧಕ್ಕೆ ಉಂಟು ಮಾಡುತ್ತಿದೆ.

               ಹಸು ಸಾಕುವವರೇ ಸ್ವಂತ ಹಿತ್ತಿಲಲ್ಲಿ ಮೇಯಲು ಬಿಟ್ಟರೆ ಇಷ್ಟೊಂದು ಸಮಸ್ಯೆ ಆಗಲಾರದು. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಾಣಬೇಕೆಂಬುದು ಆಗ್ರಹ "ರಸ್ತೆಗಳಲ್ಲಿ ದನಗಳು ತಿರುಗಾಡುವುದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ.  ಇದಕ್ಕೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು, ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

                ಸಾರ್ವಜನಿಕ ಸ್ಥಳಗಳಿಗೆ ಬಿಡುವ ದನಗಳನ್ನು ಹಿಡಿದಿಟ್ಟು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕ್ರಮವನ್ನು ಕೈಗೊಳ್ಳಲು ಸ್ಥಳೀಯ ಆಡಳಿತ ಮುಂದಾಗಬೇಕಾಗಿದೆ.


             ಅಭಿಮತ: ಹಸುಗಳನ್ನು ಸಾಕುವುದು ಅಗತ್ಯವಾದರೂ, ಇತರರಿಗೆ ತೊಂದರೆಯಾಗದಂತೆ ಸಾಕುವ ಬಗೆಗೂ ಆಸಕ್ತಿವಹಿಸಬೇಕು. ಸ್ಥಳೀಯಾಡಳಿತ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಗ್ರಾ.ಪಂ.ಅಧಿಕೃತರಿಗೆ ಶೀಘ್ರ ಕ್ರಮಕ್ಕೆ ಸೂಚಿಸಲಾಗುವುದು.

     -ರಹ್ಮಾನ್ ಉದ್ಯಾವರ

   ಪ್ರಧಾನ ಕಾರ್ಯದರ್ಶಿ.ಗ್ರಾಹಕರ ವೇದಿಕೆ.ಮಂಜೇಶ್ವರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries