ಮಂಜೇಶ್ವರ: ಮಂಜೇಶ್ವರದ ಪೋಲೀಸರು ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಮಂಜೇಶ್ವರದ ಬೀದಿಯಲ್ಲಿ ಹೊಟ್ಟೆಗೆ ಏನೂ ಲಭಿಸದೆ ಅನಾಥವಾಗಿ ತಿರುಗಾಡುತ್ತಿದ್ದ ಕರ್ನಾಟಕ ನಿವಾಸಿಯಾದ ವ್ಯಕ್ತಿಯೊಬ್ಬರನ್ನು ಪೋಲೀಸ್ ಠಾಣೆಗೆ ಕರೆತಂದು, ಆತನಿಗೆ ಆಹಾರ ನೀಡಿ ಪೋಲೀಸ್ ಅಧಿಕಾರಿಗಳು ಹಾಗೂ ಜೀಪು ಚಾಲಕ ಮಾದರಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ಮಂಜೇಶ್ವರದ ಎಸ್.ಐ ನಿಖಿಲ್ ಹಾಗೂ ಚಾಲಕ ಪ್ರಶೋಬ್ ಹೊಟ್ಟಿಗೆ ಏನೂ ಲಭಿಸದೆ ಹಸಿವಿನಿಂದ ಬೀದಿಯಲ್ಲಿ ಬಿದ್ದಿದ್ದ ಕರ್ನಾಟಕ ನಿವಾಸಿಯಾದ ಅಪರಿಚಿತ ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆ ತಂದು ಆ ವ್ಯಕ್ತಿಯನ್ನು ವಿಚಾರಿಸಿದ ಬಳಿಕ, ಆತನಿಗೆ ಮನೆಯೂ, ಕುಟುಂಬವೂ ಇಲ್ಲವೆಂಬುದು ತಿಳಿದುಬಂದಿದೆ. ವಿಹಾರ ಮಾಡುವಾಗ ಆತನಿಗೆ ಆಹಾರ ದೊರಕದೇ ಬಹಳ ಕಾಲ ಕಳೆದಿರುವುದನ್ನು ಮನಗಂಡ ಎಸ್.ಐ ಹಾಗೂ ಚಾಲಕ ಹೋಟೆಲ್ ನಿಂದ ಆಹಾರ ನೀರು ತಂದು ಆತನ ಹೊಟ್ಟೆ ತುಂಬಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಕಂಡು ಅಲ್ಲೇ ಇದ್ದ ಎ ಎಸ್ಸೈ ಇಸ್ಮಾಯಿಲ್ ಕೂಡಾ ಕೈ ಜೋಡಿಸಿದ್ದಾರೆ.
ಅನಾಥನ ಸ್ಥಿತಿಯನ್ನು ಮನಗಂಡ ಪೋಲೀಸರು ಆತನ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ಮೂಲಕ ಪರಿಶೀಲನೆ ನಡೆಸಿ ಅನಾಥಾಲಯಕ್ಕೆ ಒಪ್ಪಿಸಲಾಗುವುದಾಗಿ ತಿಳಿಸಿದ್ದಾರೆ.
ಮಂಜೇಶ್ವರದ ಪೆÇಲೀಸರು ತಮ್ಮ ಕರ್ತವ್ಯವನ್ನು ಮಾನವೀಯತೆಯೊಂದಿಗೆ ನಡೆಸಿ, ಸಮಾಜಕ್ಕೆ ಮಾದರಿ ಕೃತಿ ಬರೆದಿದ್ದಾರೆ. ಪೆÇಲೀಸ್ ಇಲಾಖೆಯ ಈ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಶೆಗೆ ಪಾತ್ರವಾಗುವುದರ ಜೊತೆಯಾಗಿ ಸಮಾಜದಲ್ಲಿ ಪೆÇಲೀಸರು ಕೇವಲ ಕಾನೂನು ಶಕ್ತಿಯಲ್ಲ, ಮನುಷ್ಯತ್ವಕ್ಕೊಂದು ನಿದರ್ಶನವಾಗಿದ್ದಾರೆಂಬ ಸಂದೇಶ ನೀಡಿದೆ.
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಜವಾಬ್ದಾರಿಯನ್ನು ಪಾಲಿಸುತ್ತಿರುವ ಈ ರೀತಿಯ ಪೆÇಲೀಸ್ ಅಧಿಕಾರಿಗಳ ನಡೆ ಇತರರಿಗೆ ಪ್ರೇರಣೆಯಾಗಿದ್ದು, ಈ ಹಿಂದೆಯೂ ಇಂತಹ ಮಾನವೀಯತೆಯನ್ನು ಇಲ್ಲಿಯ ಪೋಲೀಸರು ನಿರ್ವಹಿಸಿ ಗಮನ ಸೆಳೆದಿದ್ದರು.