ಕಣ್ಣೂರು: ವಿಶ್ವವಿಖ್ಯಾತ ಬದರಿನಾಥ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಪೆರಿಂಗೋಡ್ ಸೂರ್ಯರಾಗ್ ನಂಬೂದಿರಿ ಅವರನ್ನು ತಾತ್ಕಾಲಿಕವಾಗಿ ನಾಯಬ್ ರಾವಲ್ ಆಗಿ ನೇಮಿಸಲಾಗಿದೆ.
ಇವರು ಕೋಝಿಕ್ಕೋಡ್‍ನ ಕಲ್ಪತ್ತೂರಿನಲ್ಲಿರುವ ಪೆರಿಂಗೋಡ್ ಗೋವಿಂದನ್ ನಂಬೂದಿರಿ ಮತ್ತು ಸತ್ಯಭಾಮಾ ಅಂತರ್ಜನಮ್ ದಂಪತಿಯ ಪುತ್ರರಾಗಿದ್ದಾರೆ. ಪೂರ್ವಿಕರ ಮನೆ ಕಣ್ಣೂರು ಜಿಲ್ಲೆಯ ಚೆರುತರಂ ಗ್ರಾಮದ ಕುಲಪ್ರಂನಲ್ಲಿದೆ. ಅವರ ವಂಶ ಕಶ್ಯಪಗೋತ್ರ ಮತ್ತು ರಾಘವಪುರಂ ಸಭೆಯ ಸದಸ್ಯರು. ಅವರು ಕೃಷ್ಣಯಜುರ್ವೇದ ತೈತಿರಿಯ ಶಾಖೆ ಮತ್ತು ಬೌಧಾಯನಸೂತ್ರವನ್ನು ಅನುಸರಿಸುವವರಾಗಿದ್ದ್ತಾರೆ.
ದೆಹಲಿ ಮೂಲದ ಕೇಂದ್ರೀಯ ಸಂಸ್ಕøತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೂರ್ಯರಾಗ್ ನಂಬೂದಿರಿ ಅವರು ತಮ್ಮ ತಂದೆಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಪೂಜಾ ವಿಧಿಗಳನ್ನು ಕಲಿತರು. ರಾವಲ್ಜಿ ಎಂದು ಕರೆಯಲ್ಪಡುವುದು ಬದರಿನಾಥದ ಪ್ರಧಾನ ಅರ್ಚಕರಿಗಾಗಿದ್ದರೆ, ನಾಯಬ್ ರಾವಲ್ ಉಪ ಅರ್ಚಕರನ್ನು ಕರೆಯುವುದಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ರಾವಲ್ ಹುದ್ದೆಯಲ್ಲಿದ್ದ ಚಂದ್ರಮನ ಈಶ್ವರಪ್ರಸಾದ್ ನಂಬೂದಿರಿ ಅವರು ಕಳೆದ ಜುಲೈನಲ್ಲಿ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದರು. 2019 ರಿಂದ ನಾಯಬ್ ರಾವಲ್ ಆಗಿದ್ದ ಕುಲಪ್ರತ್ ವಾರನಕೋಟ್ ಅವರು ಅಮರನಾಥ್ ನಂಬೂದಿರಿ ಅವರನ್ನು ರಾವಲ್ ಆಗಿ ನೇಮಿಸಿದರು.
ಇದರ ಬೆನ್ನಲ್ಲೇ ತೆರವಾಗಿರುವ ನಾಯಬ್ ರಾವಲ್ ಹುದ್ದೆಗೆ 25 ವರ್ಷ ಹರೆಯದ ಸೂರ್ಯರಾಗ್ ನಂಬೂದಿರಿ ಆಯ್ಕೆಯಾಗಿದ್ದಾರೆ. ಬದರಿನಾಥ್ ಕೇದಾರನಾಥ ಮಂದಿರ ಸಮಿತಿಯು ತೆಹ್ರಿ ಮಹಾರಾಜರ ಅನುಮೋದನೆಯಂತೆ ಶಾರ್ಟ್‍ಲಿಸ್ಟ್ ಮತ್ತು ಸಂದರ್ಶನ ಸೇರಿದಂತೆ ಚುನಾವಣಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಶ್ರೀರಾಘವಪುರದ ಸಭೆಯಿಂದ ನಾಮನಿರ್ದೇಶನಗೊಂಡ ಮೂವರಲ್ಲಿ ಸೂರ್ಯರಾಗ್ ನಂಬೂದಿರಿ ಒಬ್ಬರು.