ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಓಣಂ ಔತಣಕ್ಕೆ ಇಂದು ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಇಂದಿನ ಉತ್ರಾಡಂ ಸದ್ಯ(ಭೋಜನ) ಮೇಲ್ಶಾಂತಿ ಪಿ.ಎಂ.ಮಹೇಶ್ ನಂಬೂದಿಯವರ ಕೊಡುಗೆಯಾಗಿದೆ.
ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಬ್ಬದೂಟ ನಡೆಯಿತು. ಮಧ್ಯಾಹ್ನ ಪೂಜೆಯ ಮೊದಲು ಅಡುಗೆ ತಯಾರಿ ಆರಂಭಗೊಂಡಿತು. ಕಲಭಾಭಿಷೇಕ ಮತ್ತು ವಿಶೇಷ ಬಟ್ಟೆ-ಆಭರಣ ಧರಿಸಿದ ಅಯ್ಯಪ್ಪ ಮೂರ್ತಿಗೆ ಪೂಜೆ ನಡೆಸಿ ನಂತರ ಓಣಂ ಸದ್ಯ ಬಡಿಸಲಾಯಿತು. ಮೊದಲು ಅಯ್ಯಪ್ಪನ ಮುಂದೆ ನೈವೇದ್ಯ ಭೋಜನ ಸಮರ್ಪಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಇಂದು ಮತ್ತು ನಾಳೆ ಓಣಸದ್ಯ ನಡೆಯಲಿವೆ. ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಅದ್ದೂರಿ ಅನ್ನಸಂತರ್ಪಣೆ ನಡೆಯಲಿದೆ.
ತಿರುಓಣಂ ದಿನವಾದ ಇಂದಿನಿಂದ ಶಬರಿಮಲೆ ಸನ್ನಿಧಾನದಲ್ಲಿ ದೇವರಿಗೆ ಕಳಾಭಿಷೇಕ ಮತ್ತು ಭಕ್ತರಿಗೆ ಹಂಚಲು ಶ್ರೀಗಂಧವನ್ನು ಸಿದ್ಧಪಡಿಸಲಾಗಿತ್ತು. ಶ್ರೀಗಂಧ ತೇಯುವ ಯಂತ್ರವನ್ನು ಭಕ್ತರೊಬ್ಬರು ದೇವರಿಗೆ ಸಮರ್ಪಿಸಿದರು. ಸನ್ನಿಧಾನದ ಎರಡು ಶ್ರೀಗಂಧದ ಕೊರಡು ತೇಯುವ ಯಂತ್ರಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಶೈತ್ಯೀಕರಣ ವ್ಯವಸ್ಥೆಯನ್ನು ಹೊಂದಿದೆ.
ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮತ್ತು ಸದಸ್ಯ ಜಿ.ಸುಂದರೇಶನ್ ಅವರು ಸನ್ನಿಧಾನಂನಲ್ಲಿ ಶ್ರೀಗಂಧ ತೇಯುವ ಯಂತ್ರವನ್ನು ಉದ್ಘಾಟಿಸಿದರು. ಸದ್ಯ ದೇವಸ್ವಂ ಮಂಡಳಿಯ ಸ್ಟ್ರಾಂಗ್ ರೂಂನಲ್ಲಿ ಶೇಖರಿಸಿರುವ ಶ್ರೀಗಂಧವನ್ನು ಅರೆದು ಬಳಕೆ ಮಾಡಲಾಗುತ್ತಿದ್ದು, ದಾಸ್ತಾನು ಖಾಲಿಯಾದ ಕೂಡಲೇ ಅರಣ್ಯ ಇಲಾಖೆಯಿಂದ ಶ್ರೀಗಂಧವನ್ನು ಬಳಸಲು ನಿರ್ಧರಿಸಲಾಗಿದೆ.