ಜಬಲ್ಪುರ್: ಭಾರತೀಯರು ವಿಶೇಷವಾಗಿ ಪೂಜಿಸುವ ಗೋಮಾತೆಯನ್ನು ಪ್ರಾಣಿ ವರ್ಗದಿಂದ ತೆಗೆದು ವಿಶೇಷ ಸ್ಥಾನಮಾನ ನೀಡಬೇಕೆಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದ್ದಾರೆ.
ಜಬಲ್ಪುರ್: ಭಾರತೀಯರು ವಿಶೇಷವಾಗಿ ಪೂಜಿಸುವ ಗೋಮಾತೆಯನ್ನು ಪ್ರಾಣಿ ವರ್ಗದಿಂದ ತೆಗೆದು ವಿಶೇಷ ಸ್ಥಾನಮಾನ ನೀಡಬೇಕೆಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಟ್ಟಿಗೆ ಈ ಕುರಿತು ಮಾತನಾಡಿದ ಸರಸ್ವತಿ ಮಹಾರಾಜ್, ಗೋವು ಬರಿ ಪ್ರಾಣಿಯಲ್ಲ ನಾವೆಲ್ಲರೂ ಗೋ ಮಾತೆಯನ್ನು ಪೂಜಿಸುತ್ತೇವೆ.
ಇದಲ್ಲದೆ ದೇಶದಲ್ಲಿ ಗೋ ಮಾತೆಯ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಬೇಕಿದೆ. ಗೋಹತ್ಯೆಯಲ್ಲಿ ಭಾಗುಯಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ಗೋ ಮಾತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಪ್ರವಾಸ ನಡೆಯಲಿದ್ದು, ಅಯೋಧ್ಯೆಯಿಂದ ಪ್ರಾರಂಭವಾಗಲಿದೆ. ಗೋವನ್ನು ರಾಷ್ಟ್ರೀಯ ಮಾತೆ ಎಂದು ಘೋಷಿಸಬೇಕೆಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಆಗ್ರಹಿಸಿದ್ದಾರೆ.