HEALTH TIPS

ಕೇರಳ ರಾಜಕೀಯ ಅಸ್ಪøಶ್ಯತೆಯೆಡೆಗೆ: ಕಳವಳ ವ್ಯಕ್ತಪಡಿಸಿದ ಗೋವಾ ರಾಜ್ಯಪಾಲರು

ಕೋಝಿಕ್ಕೋಡ್: ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಬೇರನ್ನೇ ಅಲುಗಾಡಿಸುವ ರಾಜಕೀಯ ಅಸ್ಪøಶ್ಯತೆ ಕೇರಳದಲ್ಲಿದೆ ಮತ್ತು ರಾಜಕೀಯ ಅಸ್ಪøಶ್ಯತೆ ಮುನ್ನೆಲೆಗೆ ತರುತ್ತಿರುವವರು ಕ್ರಮಿನಲ್ ಮನೋಸ್ಥಿತಿಯವರು ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಗೋವಾ ರಾಜ್ಯಪಾಲ ಪಿ. ಶ್ರೀಧರನ್ ಪಿಳ್ಳೆ.ಅಭಿಪ್ರಾಯಪಟ್ಟರು.

ಅವರು ಕೋಝಿಕ್ಕೋಡ್‍ನಲ್ಲಿ ನಿನ್ನೆ ನಡೆದ ಪಿ.ಪಿ.ಮುಕುಂದನ್ ಸ್ಮಾರಕ ಸಮಿತಿ ಆಯೋಜಿಸಿದ್ದ ವಂದೇಮುಕುಂದಂ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಮಾತನಾಡಿ, ಕೇರಳದಲ್ಲಿ ರಾಜಕೀಯ ಅಸ್ಪೃಶ್ಯತೆ ವ್ಯಾಪಕವಾಗಿದೆ ಎಂದರು.

 ಈ ಸಂದರ್ಭ ಸುರೇಶ್ ಗೋಪಿ ಅವರು ರಾಜ್ಯಪಾಲರಿಂದ ಮುಕುಂದನ್ ಸೇವಾ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಜ್ಞಾನಕ್ಕೆ ಸ್ಥಾನವಿಲ್ಲ. ದೀನದಯಾಳ್ ಉಪಾಧ್ಯಾಯ ಅವರು ಕೋಝಿಕ್ಕೋಡ್‍ನಲ್ಲಿ ಜನಸಂಘದ ರಾಷ್ಟ್ರೀಯ ಸಮ್ಮೇಳನ ನಡೆದಾಗ ರಾಜಕೀಯದಲ್ಲೂ ಸೋಮಾರಿತನ, ಅಸ್ಪøಶ್ಯತೆಗಳು ಪಾಪ ಎಂದು ಸ್ಪಷ್ಟಪಡಿಸಿದ್ದರು. 1967 ರಲ್ಲಿ, ಸಂಯುಕ್ತ ವಿದಾಯಕ್ ದಳದ ನೇತೃತ್ವದಲ್ಲಿ, ಭಾರತದ ಎಂಟು ರಾಜ್ಯಗಳಲ್ಲಿ ಸರ್ಕಾರ ಬದಲಾವಣೆಯಾಯಿತು. ಬಿಹಾರದಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಜನಸಂಘ ಒಂದೇ ಸಂಪುಟದ ಸದಸ್ಯರಾದರು. ಇದನ್ನು ಉಲ್ಲೇಖಿಸಿ, ರಾಜಕೀಯದಲ್ಲಿನ ಭಿನ್ನಾಭಿಪ್ರಾಯಗಳು ವೈರುಧ್ಯಗಳಲ್ಲ, ವೈವಿಧ್ಯತೆ ಎಂಬುದು ಅವರ ನಿಲುವಾಗಿತ್ತು. ಆದರೆ ಅಸ್ಪೃಶ್ಯತೆ ಮಾತ್ರ ಇಂದಿನದಲ್ಲ. ಕೇರಳ ಮತ್ತೆ ಹಾನಿಕಾರಕ ಆ  ಸ್ಥಿತಿಗೆ ತಲುಪುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು. .

ಪ್ರಧಾನಿ ನರೇಂದ್ರ ಮೋದಿ ಇರುವ ಕಾರಣ ಶಿವಗಿರಿ ಯಾತ್ರೆ ಸಮಾವೇಶಕ್ಕೆ ಗೈರುಹಾಜರಾಗಿದ್ದ ಕೇರಳದ ಎರಡೂ ಮೋರ್ಚಾಗಳ ಮುಖಂಡರು ಇಂದು ದೆಹಲಿಯಲ್ಲಿ ಅವರನ್ನು ಭೇಟಿಯಾಗಲು ಅರ್ಜಿ ಸಲ್ಲಿಸಿರುವುದು ನೆನಪಿಡಬೇಕು. ಬರೀ ಸಭೆಗಳನ್ನು ವಿವಾದ ಮಾಡುವ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು 1977 ಮತ್ತು 80ರ ಚುನಾವಣೆಗಳಲ್ಲಿ ಯಾವ ನಿಲುವು ತಳೆದಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಸಂವಿಧಾನವು ಜಾತಿ ಮತ್ತು ಧಾರ್ಮಿಕ ತಾರತಮ್ಯವನ್ನು ತಿರಸ್ಕರಿಸುವ ಭಾರತದಲ್ಲಿ, ರಾಜಕೀಯ ತಟಸ್ಥತೆಯನ್ನು ಅನುಸರಿಸುವವರು ಉಪ್ಪಿನ ಮಡಕೆಯಂತಾಗುತ್ತಾರೆ. ಎರಡೂ ಮೋರ್ಚಾಗಳು ತತ್ವ-ಸಿದ್ಧಾಂತ ಇಲ್ಲದೇ ಬೂಟಾಟಿಕೆ ನಾಟಕ ನಡೆಸುತ್ತಿವೆ ಎಂದು ಶ್ರೀಧರನ್ ಪಿಳ್ಳೈ ಹೇಳಿದರು.

ಎಡಿಜಿಪಿಯವರು ಆರ್‍ಎಸ್‍ಎಸ್ ಸಭೆಯಲ್ಲಿ ಭಾಗವಹಿಸಿದ್ದನ್ನು ಟೀಕಿಸುವ ಅರ್ಹತೆ ಕೇರಳದಲ್ಲಿ ಯಾರಿಗೂ ಇಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ. ಒಂದು ವಾರದಿಂದ ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇಂದು ಚರ್ಚೆಯನ್ನು ಟೀಕಿಸುವವರು ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ರಿವರ್ಸ್ ಗೇರ್‍ಗೆ ಹೋಗಬೇಕಾಗುತ್ತದೆ. ಕಣ್ಣೂರು ಕಲೆಕ್ಟರೇಟ್ ನಲ್ಲಿ ನಾಯನಾರ್ ಹಾಗೂ ಬಿಜೆಪಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಪಿ.ಪಿ.ಮುಕುಂದನ್ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಡೆಸಿದ ಇಚ್ಛಾಶಕ್ತಿಯ ಪ್ರಯತ್ನಗಳನ್ನು, ನಡೆದ ಮಾತುಕತೆಗಳನ್ನು ಗುರುತಿಸಬೇಕು. ಪ್ರಜಾಪ್ರಭುತ್ವ ಎಲ್ಲ ರಾಜಕಾರಣಿಗಳಿಗೂ ಇದೆ. ರಾಜಕೀಯ ಅಸ್ಪೃಶ್ಯತೆ ಅಪರಾಧ. ಇದನ್ನು ಪ್ರಚಾರ ಮಾಡುವವರು ಕ್ರಿಮಿನಲ್ ಗಳು ಎಂದು ಹೇಳಿದರು. ಪಿಪಿ ಮುಕುಂದನ್ ಅವರು ರಾಷ್ಟ್ರ ಮತ್ತು ಸಮಾಜಕ್ಕೆ ಸಮರ್ಪಿತ ನಿಸ್ವಾರ್ಥ ಜೀವನವನ್ನು ನಡೆಸಿದ್ದರು ಎಂದವರು ಸಂಸ್ಮರಣಾ ಸಭೆಯಲ್ಲಿ ತಿಳಿಸಿದರು. 

ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಪಿ. ಶ್ರೀಶನ್ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಪ್ರಾಸ್ತಾವಿಕ ಉಪನ್ಯಾಸ ನೀಡಿದರು. ಭಾರತೀಯ ವಿದ್ಯಾನಿಕೇತನ ರಾಜ್ಯಾಧ್ಯಕ್ಷ ಪಿ. ಗೋಪಾಲನ್ ಕುಟ್ಟಿ ಮಾಸ್ತರ್, ಮಾತೃಭೂಮಿ ವ್ಯವಸ್ಥಾಪಕ ಸಂಪಾದಕ ಪಿ.ವಿ. ಚಂದ್ರನ್, ಕೆ. ನಾರಾಯಣನ್, ಅಡ್ವ. ವಿ.ಕೆ. ಸಜೀವನ್, ಪಿ. ಉಣ್ಣಿಕೃಷ್ಣನ್, ಅಡ್ವ. ಕೆ.ವಿ ಸುಧೀರ್  ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries